Monday, August 3, 2026

BDA Apartments

Home Front Page  ಕರೇಗುಡ್ಡಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ: ಮಾರ್ಗಮಧ್ಯದಲ್ಲಿ ಆಹವಾಲು ಸ್ವೀಕಾರ…

 ಕರೇಗುಡ್ಡಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ: ಮಾರ್ಗಮಧ್ಯದಲ್ಲಿ ಆಹವಾಲು ಸ್ವೀಕಾರ…

ಬೆಂಗಳೂರು, ಜೂನ್ 26,2019(www.justkannada.in): ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ, ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮಕ್ಕೆ ರಾಯಚೂರಿನಿಂದ  ಕ.ರಾ.ರ.ಸಾ.ಸಂಸ್ಥೆ ಬಸ್ ನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೆರಳುತ್ತಿದ್ದು ಮಾರ್ಗಮಧ್ಯದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು.

ಕರೇಗುಡ್ಡ ಗ್ರಾಮಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಾರ್ವಜನಿಕರ ಬಳಿ ಮನವಿ ಸ್ವೀಕರಿಸಿದರು. ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಜನರ ಬಳಿ ಅಹವಾಲುಗಳನ್ನ ಸ್ವೀಕರಿಸಿದರು. ಇದೇ ವೇಳೆ ವೈಟಿಪಿಎಸ್ ಸಿಬ್ಬಂದಿಗಳು ತಮ್ಮ ಸಮಸ್ಯಗೆಗಳ ಬಗ್ಗೆ ಸಿಎಂಗೆ ಮನವಿ ಸಲ್ಲಿಸಿದರು.

ಕರೇಗುಡ್ಡದಲ್ಲಿ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದ್ದು ಬೃಹತ್ ಪೆಂಡಾಲ್ ಹಾಕಲಾಗಿದೆ. ಸಾರ್ವಜನಿಕರಿಂದ ಮನವಿ ಸ್ವೀಕರಿಸಲು ಕೌಂಟರ್ ತೆರೆಯಲಾಗಿದ್ದು ಎಲ್ಲಾ ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದೆ. ಇನ್ನು ಸಿಎಂ ಹೆಚ್.ಡಿ ಕುಮಾರಸ್ವಾಮಿ ಕರೇಗುಡ್ಡದತ್ತ ಆಗಮಿಸುತ್ತಿದ್ದಾರೆ.

Key words: CM HD Kumaraswamy –gramavastavya-Karegudda- rayachur