Sunday, August 23, 2026

BDA Apartments

Home Front Page ಎಂಎಲ್ ಎ ಡಾನ್ಸ್‌: ಮಗಳ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ…

ಎಂಎಲ್ ಎ ಡಾನ್ಸ್‌: ಮಗಳ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ…

ಮೈಸೂರು,ಜೂ,25,2019(www.justkannada.in): ತನ್ನ ಮಗಳ ಮದುವೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಶಾಸಕ  ನರೇಂದ್ರ ಅವರು ಸಖತ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಇಂದು ಹನೂರು ಶಾಸಕ ನರೇಂದ್ರ ಅವರ ಮಗಳ ವಿವಾಹ ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಈ ವಿವಾಹ ಸಮಾರಂಭದಲ್ಲಿ ಶಾಸಕ  ನರೇಂಧ್ರ ಅವರು ಹಾಡೊಂದಕ್ಕೆ ಡ್ಯಾನ್ಸ್ ಮಾಡಿದರು.

ಕನ್ಯಾದಾನ ಮಾಡಿದ ಬಳಿಕ ಶಾಸಕ  ನರೇಂದ್ರ ಅವರು ಕಲರ್ ಪುಲ್ ಸ್ಟೆಪ್ ಹಾಕಿದರು. ತಮ್ಮ ಕುಟುಂಬದ ಜತೆ  ರಾಜಕೀಯ ಜಂಜಾಟ ಮರೆತ ಪುತ್ರಿ ವಿವಾಹದಲ್ಲಿ ಪುಲ್ ಎಂಜಯ್ ಮಾಡಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಂಎಲ್ ಎ  ನರೇಂದ್ರ ಅವರ ಡಾನ್ಸ್ ಫುಲ್ ವೈರಲ್ ಆಗಿದೆ.

Key words: MLA –narendra- full-dance-daughter’s –wedding-mysore