Tuesday, August 4, 2026

BDA Apartments

Home Front Page ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಾಯ, ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಯತ್ನ…!

ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಾಯ, ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಯತ್ನ…!

ಮೈಸೂರು,ಡಿಸೆಂಬರ್,21,2020(www.justkananda.in) : ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದು , ತೆಪ್ಪ ನಡೆಸುವ ಮಂದಿ ರಕ್ಷಿಸಿದ್ದಾರೆ.Teachers,solve,problems,Government,bound,Minister,R.Ashok

ಜಿಲ್ಲೆಯ ಟಿ.ನರಸೀಪುರದಲ್ಲಿರುವ ಗುಂಜಾನರಸಿಂಹಸ್ವಾಮಿ ದೇಗುಲದ ಬಳಿಯಿರುವ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಚಾಮರಾಜನಗರದ ನಿವಾಸಿಯಾದ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

8ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ಇಂತಹ ನಿರ್ಧಾರಕ್ಕೆ ಕೈ ಹಾಕಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದಾಳೆ ಎಂದು ತಿಳಿದು ಬಂದಿದೆ.

Like-getting-married-Alcoholic-father-insists-little- girl-Attempt-commit-suicide ...!

ಈ ವೇಳೆ ಅಲ್ಲೇ ಇದ್ದ ತೆಪ್ಪ ನಡೆಸುವವರು ಬಾಲಕಿ ಹಾರಿದನ್ನು ನೋಡಿ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಬಾಲಕಿಯನ್ನ ರಕ್ಷಿಸಿ ಸ್ಥಳೀಯರು ನರಸೀಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿ ಪೋಷಕರನ್ನು ಕರೆಸಿ ಅವರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

key words : Like-getting-married-Alcoholic-father-insists-little- girl-Attempt-commit-suicide …!