Saturday, August 15, 2026

BDA Apartments

Home Cinema ‘ I LOVE YOU ‘ ಸಿನಿಮಾದ ಆ ದೃಶ್ಯ ಒಪ್ಪಿಕೊಳ್ಳಬಾರದಿತ್ತು ; ಟಿವಿ ಸಂದರ್ಶನದಲ್ಲಿ...

‘ I LOVE YOU ‘ ಸಿನಿಮಾದ ಆ ದೃಶ್ಯ ಒಪ್ಪಿಕೊಳ್ಳಬಾರದಿತ್ತು ; ಟಿವಿ ಸಂದರ್ಶನದಲ್ಲಿ ಕ್ಯಾಮೆರಾ ಎದುರೇ ಕಣ್ಣೀರಿಟ್ಟ ರಚಿತಾ ರಾಮ್ ..

 

ಬೆಂಗಳೂರು, ಜೂ.22, 2019 : (www.justkannada.in news ) : ನನ್ನಪ್ಪ ಇನ್ನೂ ಐ ಲವ್​ ಯೂ ಸಿನಿಮಾ ನೋಡಿಲ್ಲ. ಆದರೆ, ಸಿನಿಮಾ ನೋಡಿಬಂದ ಅಮ್ಮನಿಂದ ವಿಷಯ ತಿಳಿದುಕೊಂಡು ಸಿನಿಮಾ ನೋಡೋದೇ ಇಲ್ಲ ಅಂದುಬಿಟ್ಟರು. ಅವರಿಗೆ ತುಂಬ ನೋವು ಮಾಡಿದ್ದೇನೆ, ಸಾರಿ ಅಪ್ಪಾ… ಎಂದು ಡಿಂಪಲ್​ ಕ್ವೀನ್ ರಚಿತಾ ರಾಮ್​ ಕಣ್ಣೀರು ಹಾಕಿದ್ದಾರೆ.

ಕನ್ನಡದ ನ್ಯೂಸ್ 18 ಸುದ್ದಿ ವಾಹಿನಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಹಿಂದೆಯೂ ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾದ ಹಾಟ್- ಬೋಲ್ಡ್ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಖುದ್ದು ರಚಿತಾ ರಾಮ್ ಅವರೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಕಣ್ಣೀರಿಟ್ಟಿರುವುದು ಅವರ ಸೂಕ್ಷ್ಮ ಮನಸ್ಸಿಗೆ ಸಾಕ್ಷಿಯಾಗಿದೆ.

ಸುದ್ದಿ ವಾಹಿನಿಯಲ್ಲಿ ‘ಐ ಲವ್ ಯು’ ಚಿತ್ರದ ಹಾಟ್ ಸನ್ನಿವೇಶಗಳ ಬಗ್ಗೆ ಮಾತನಾಡಿರುವ ರಚಿತರಾಮ್ ಹೇಳಿದಿಷ್ಟು….

ಮನೆಯಲ್ಲಿ ಈ ರೀತಿಯ ದೃಶ್ಯಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಿನಿಮಾ ನೋಡಿಬಂದ ಅಮ್ಮನಿಂದ ವಿಷಯ ತಿಳಿದುಕೊಂಡು ನನ್ನ ಅಪ್ಪ ಈ ಸಿನಿಮಾ ನೋಡೋದೇ ಇಲ್ಲ ಅಂದುಬಿಟ್ಟರು.
ಹೀರೋಯಿನ್ ಆಗಿ ರಚಿತಾರಾಮ್‌ರನ್ನು ಸ್ವೀಕರಿಸಿದ್ದೇನೆ, ಆದರೆ ಮಗಳಾಗಿ ಈ ಸಿನಿಮಾ ನೋಡಲು ಆಗಿಲ್ಲ ಎಂದು ತಂದೆ ಹೇಳಿದ್ದು ರಚಿತಾಗೆ ತುಂಬಾನೇ ಬೇಸರ ತಂದಿದೆ.
ನಮ್ಮ ತಂದೆತಾಯಿಗೆ ಸಾರಿ ಹೇಳಿದ್ದೇನೆ. ಇನ್ನು ಮುಂದೆ ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸಲ್ಲ ಎಂದು ಹೇಳಿರುವೆ. ಟಿವಿ ಸಂದರ್ಶನದಲ್ಲಿ ಅಳುತ್ತಲೇ ಮಾತನಾಡಿರುವ ರಚಿತಾ ರಾಮ್, “ಜೀವನದಲ್ಲಿ ತಂದೆತಾಯಿಗೆ ಹರ್ಟ್ ಮಾಡಿಬಿಟ್ಟಿದ್ದೀನಿ. ಈ ರೀತಿಯ ಚಿತ್ರವನ್ನು ಒಪ್ಪಿಕೊಳ್ಳಬಾರದಿತ್ತು. ನನ್ನ ಮೊದಲ ಆದ್ಯತೆ ಕುಟುಂಬ. ನನಗೆ ನಾಟಕ ಮಾಡಲು ಬರಲ್ಲ. ಮನಸ್ಸಲ್ಲಿ ಏನಿದೆಯೋ ಅದನ್ನೇ ಹೇಳುತ್ತಿದ್ದೇನೆ. ಅಪ್ಪನ ಮುಂದೆ ಹೋಗ್ಲಿ ಬಿಡಪ್ಪ, ಇನ್ನು ಮುಂದೆ ಮಾಡಲ್ಲ ಎಂದು ಹೇಳಿದ್ದೇನೆ. ಆದರೆ ಇಲ್ಲಿ ನನಗೆ ಅಳು ತಡೆದುಕೊಳ್ಳಲು ಆಗುತ್ತಿಲ್ಲ” ಎಂದು ಕ್ಯಾಮೆರದ ಮುಂದೆಯೇ ಕಣ್ಣೀರಿಟ್ಟಿದ್ದಾರೆ.

—-

key words : kannada-actress-rachitha-ram-cries-infront-of-tv-camera-in-an-interview