Wednesday, August 26, 2026

BDA Apartments

Home Front Page ವಾಲ್ ಮಾರ್ಕ್ ಕಂಪನಿ ಮತ್ತು ಮಾಲೀಕನ ಮನೆ ಕಚೇರಿ ಮೇಲೆ ಎಸಿಬಿ ದಾಳಿ…

ವಾಲ್ ಮಾರ್ಕ್ ಕಂಪನಿ ಮತ್ತು ಮಾಲೀಕನ ಮನೆ ಕಚೇರಿ ಮೇಲೆ ಎಸಿಬಿ ದಾಳಿ…

ಬೆಂಗಳೂರು,ಮೇ,4,2019(www.justkannada.in): ವಾಲ್ ಮಾರ್ಕ್ ಕಂಪನಿ  ಮಾಲೀಕ ರತನ್ ಲಾಲ್ ಅವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ವಾಲ್ ಮಾರ್ಕ್ ಕಂಪನಿ ಮೇಲೆ ರತನ್ ಲಾಲ್ ಅವರ ಗೋಲ್ಡನ್ ಎನ್ ಕ್ಲೈವ್ ಫ್ಲಾಟ್ ನ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ನಡೆಸಿದ್ದಾರೆ ಅಲ್ಲದೇ ಹೆಚ್ ಎಎಲ್ ಬಳಿಯ ಅವರ ಕಚೇರಿಯನ್ನೂ ಪರಿಶೀಲನೆ ನಡೆಸಿದ್ದಾರೆ.

ಬೆಳಿಗ್ಗೆಯೇ ಗುತ್ತಿಗೆದಾರ,ರಿಯಲ್ ಎಸ್ಟೇಟ್ ಏಜೆಂಟ್ ಗಳ ಮನೆಯನ್ನು ಗುರಿಯಾಗಿಸಿಕೊಂಡು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ,  ಅಮಿತ್ ಬೋಳಾರ್ ಎಂಬುವರ ಇಂದಿರಾನಗರದ ಮನೆ ಮೇಲೆ, ಹಾಗೂ ವಾಲ್ ಮಾರ್ಟ್ ಏಜೆಂಟ್ ಗಳಾದ ಮುನಿರಾಜು, ಗೌತಮ್ ಎಂಬುವರ ಕೆ.ಆರ್. ಪುರಂನಲ್ಲಿರುವ ನಿವಾಸದ ಮೇಲೆ ಕೂಡ ಎಸಿಬಿ ದಾಳಿಯಾಗಿದೆ.

Key words: ACB -attack – Wallmark- company – owner- home –office