ಮುಂಜಾನೆಯೇ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ…

ಮೈಸೂರು,ಮೇ,4,2019(www.justkannada.in): ಕಾಡಾನೆ ದಾಳಿ ನಡೆಸಿದ ಪರಿಣಾಮ ಆಂಧ್ರಮೂಲದ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಕಗ್ಗೇರಿ ನಿವಾಸಿ ಹನುಮಂತರಾಯ ಆನೆದಾಳಿಗೆ ಗಂಭೀರ ಗಾಯಗೊಂಡ ವ್ಯಕ್ತಿ.

ಕಾಲುವೆ ನಿರ್ಮಾಣ ಕೆಲಸಕ್ಕೆ  ಆಗಮಿಸಿದ್ದ ಕೂಲಿ ಕಾರ್ಮಿಕ ಹನುಮಂತರಾಯ ಆಗಮಿಸಿದ್ದರು. ಈ ವೇಳೆ ಮಾದಾಪುರ ಹೊರವಲಯದಲ್ಲಿ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಂತದಿಂದ ಹೊಟ್ಟೆಗೆ ತಿವಿದು ಕಾಡಾನೆ ಗಾಯಗೊಳಿಸಿದ್ದು, ತೀವ್ರ ರಕ್ತಸ್ರಾವದಿಂದ ಹನುಮಂತರಾಯ ಅಸ್ವಸ್ಥರಾಗಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಗಾಯಾಳುವನ್ನ ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಾವು ಬದುಕಿನ ಮಧ್ಯೆ ಕೂಲಿ ಕಾರ್ಮಿಕ‌ ಹನುಮಂತರಾಯ ಹೋರಾಡುತ್ತಿದ್ದಾರೆ.

Key words: elephant-attacked – morning-Serious injury – person.