Monday, September 14, 2026

BDA Apartments

ವಿಶ್ವಕಪ್ ಕ್ರಿಕೆಟ್: ಗಾಯಗೊಂಡ ಆಲ್ ರೌಂಡರ್ ವಿಜಯ್ ಶಂಕರ್ BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ಗಾಯಗೊಂಡ ಆಲ್ ರೌಂಡರ್ ವಿಜಯ್ ಶಂಕರ್

ವಿಶ್ವಕಪ್ ಕ್ರಿಕೆಟ್: ಗಾಯಗೊಂಡ ಆಲ್ ರೌಂಡರ್ ವಿಜಯ್ ಶಂಕರ್

ಸೌತಾಂಪ್ಟನ್ , ಜೂನ್ 21, 2019 (www.justkannada.in): ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ವಿಜಯಶಂಕರ್ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದಾರೆ.

ನೆಟ್ಸ್‌ನಲ್ಲಿ ಅವರಿಗೆ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬೂಮ್ರಾ ಅವರ ಯಾರ್ಕರ್‌ ಎಸೆತವು ವಿಜಯಶಂಕರ್ ಅವರ ಕಾಲಿನ ಹೆಬ್ಬೆರಳಿಗೆ ಬಡಿಯಿತು. ಇದರಿಂದಾಗಿ ವಿಜಯಶಂಕರ್ ನೋವಿನಿಂದ ನರಳಿದರು. ನಂತರ ಅಭ್ಯಾಸವನ್ನು ಮೊಟಕುಗೊಳಿಸಿದರು.

‘ವಿಜಯ್ ಅವರಿಗೆ ಪೆಟ್ಟಾಗಿದೆ. ಆದರೆ ಗಂಭೀರ ಗಾಯವಾಗಿಲ್ಲ. ಸಂಜೆಯವರೆಗೆ ನೋವು ಶಮನವಾಗುವ ನಿರೀಕ್ಷೆ ಇದೆ. ಆತಂಕಪಡುವಂತಹ ವಿಷಯವೇನಿಲ್ಲ’ ಎಂದು ತಂಡದ ಮೂಲಗಳು ತಿಳಿಸಿವೆ.