ಭಾರತ-ಅಫ್ಘಾನಿಸ್ತಾನ ಪಂದ್ಯ ನೋಡಲು ಲಂಡನ್ ವಿಮಾನ ಏರಿದ ಅನುಷ್ಕಾ

ಬೆಂಗಳೂರು, ಜೂನ್ 21, 2019 (www.justkannada.in): ಅನುಷ್ಕಾ ಶರ್ಮಾ ಲಂಡನ್ ಕ್ರಿಕೆಟ್ ಮೈದಾನದ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೌತಾಂಪ್ಟನ್ ‌ನ ದಿ ರೋಸ್ ಬೌಲ್ ನಲ್ಲಿ ಶನಿವಾರ, ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯ ವೀಕ್ಷಣೆಗೆ ಅನುಷ್ಕಾ ಆಗಮಿಸುತ್ತಾರೆ.

ಈಗಾಗಲೇ ಲಂಡನ್ ತಲುಪಿರುವ ಅನುಷ್ಕಾ ಅವರು ಲಂಡನ್ ಬೀದಿಯಲ್ಲಿ ವಿರಾಟ್ ಜತೆ ಸುತ್ತಾಟ ನಡೆಸಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.