Wednesday, August 12, 2026

BDA Apartments

Home Front Page ಸರ್ಕಾರದಿಂದ ರೈತರಿಗೆ ಅಗೌರವ : ಕಾಯ್ದೆ ಹಿಂಪಡೆಯುವವರೆಗೂ ಹೋರಾಟ -ವಾಟಾಳ್ ನಾಗರಾಜ್..

ಸರ್ಕಾರದಿಂದ ರೈತರಿಗೆ ಅಗೌರವ : ಕಾಯ್ದೆ ಹಿಂಪಡೆಯುವವರೆಗೂ ಹೋರಾಟ -ವಾಟಾಳ್ ನಾಗರಾಜ್..

ಬೆಂಗಳೂರು,ಡಿಸೆಂಬರ್,8,2020(www.justkannada.in): ರಾಜ್ಯ ಸರ್ಕಾರ ಬಂದ್ ವಿರೋಧಿ ಸರ್ಕಾರ. ನೂತನ ಕೃಷಿ ಕಾಯ್ದೆ ಹಿಂಪಡೆಯುವವರೆಗೂ ರೈತರ ಜತೆ ನಿಂತು ಹೋರಾಟ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.logo-justkannada-mysore

ರೈತರು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಇದು ಅನವಶ್ಯಕ ಬಂದ್ ಅಲ್ಲ. ಯಾವುದೇ ಅಧಿಕಾರ ಶಾಶ್ವತವಾಗಿರುವುದಿಲ್ಲ. ಬಂದ್ ವಿರುದ್ಧ ಬಿಎಸ್ ವೈ ಆಕ್ಷೇಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ರೈತರಿಗೆ ಅಗೌರವ ಸೂಚಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಹಿಂಪಡೆಯುವವರೆಗೂ ರೈತರ ಜತೆ ನಿಂತು ಹೋರಾಟ ಮಾಡುತ್ತೇವೆ ಎಂದರು.defendant-attitude-state-government-farmer-protest-act-revoked-vatal-nagaraj

ಬಂದ್ ವಿಫಲವಾಗಲು ಬಿಎಸ್ ವೈ ಕಾರಣ. ಬೆಂಗಳೂರಿನ ಜನರಿಗೆ ಇಲ್ಲಿನ ಅನ್ನ ನೀರು ಬೇಕು ಆದರೇ ಬಂದ್ ಬೆಂಬಲಿಸುವುದಿಲ್ಲ. ಆದರೂ ಸಹ ಮುಂದಿನ ದಿನಗಳಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: Defendant -attitude – state government-farmer-protest-act – revoked-Vatal Nagaraj ..