ಪ್ರಧಾನಿ ಮೋದಿ ಅವರಿಗೆ ರೈತರ ಜೊತೆ ಮಾತನಾಡುವುದಕ್ಕೆ ಟೈಮ್ ಇಲ್ವಾ : ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರಶ್ನೆ

ಬೆಂಗಳೂರು,ಡಿಸೆಂಬರ್,08,2020(www.justkannada.in) : ಪ್ರಧಾನಿ ಮೋದಿ ಕ್ರಿಕೆಟ್ ಆಟಗಾರರು, ಸಿನಿಮಾ ನಟರ ಜೊತೆ ಮಾತನಾಡುತ್ತಾರೆ. ಆದರೆ, ರೈತರ ಜೊತೆ ಮಾತನಾಡುವುದಕ್ಕೆ ಟೈಮ್ ಇಲ್ವಾ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಮೋದಿ ವಿರುದ್ಧ ಪ್ರಶ್ನಿಸಿದ್ದಾರೆ.  logo-justkannada-mysore

ರೈತರು ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದ ಬಹುತೇಕ ಕಡೆ ಪ್ರತಿಭಟನೆಗಳ ಕಾವು ಮೆಲ್ಲನೆ ಏರುತ್ತಿದೆ.  ಮೋದಿ ವಿರುದ್ಧ ಪ್ರಹಾರ ಬೀಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಮೊಂಡು ಹಠ ಬಿಡಬೇಕು 

ಇವರು ರೈತರ ಪಿಎಂ ಅಲ್ಲ ಕಾರ್ಪೊರೇಟ್ ಪಿಎಂ ಆಗಿದ್ದಾರೆ ಅಂತಾ ಅನಿಸುತ್ತಿದೆ. ಸರ್ಕಾರ ಮೊಂಡು ಹಠ ಬಿಡಬೇಕು. ರೈತರ ಪರವಾಗಿ ನಿಲ್ಲಬೇಕು. ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು. ಎಲ್ಲಾ ರೈತರ ಜೊತೆ ಬೆಂಬಲಕ್ಕೆ ನಿಲ್ಲಬೇಕು ಎಂದಿದ್ದಾರೆ.

ಸಂಕಷ್ಟದ ಸಮಯದಲ್ಲೂ ನಾವು ದವಸ ಧಾನ್ಯ ತರಕಾರಿ ಬೆಳೆದಿದ್ದೇವೆ. ಒಂದು ದಿನ ಬಂದ್ ಮಾಡಿ ಬೆಂಬಲ ನೀಡಬೇಕು. ಇವತ್ತು ಬೆಂಗಳೂರಿನಲ್ಲಿ ಎಲ್ಲರೂ ಪ್ರತಿಭಟನೆ ಮಾಡ್ತೀವಿ. ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Time-PM Modi-speak-with-farmers-Farmer-leader- Kuruburu Shanthakumar-Question

key words : Time-PM Modi-speak-with-farmers-Farmer-leader- Kuruburu Shanthakumar-Question