Thursday, October 15, 2026

Dasara Wishes

Happy Dasara
Home Cinema ನಾಗಚೈತನ್ಯಗೆ ಜತೆಯಾದ ‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ

ನಾಗಚೈತನ್ಯಗೆ ಜತೆಯಾದ ‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ

ಹೈದರಾಬಾದ್, ಜೂನ್ 21, 2019 (www.justkannada.in): ‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸೌತ್ ಸಿನಿ ಇಂಡಸ್ಟ್ರಿಯ ಬಹು ಬೇಡಿಯ ನಟಿಯಾಗಿರುವ ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಫಿದಾ’ ಚಿತ್ರದ ಮೂಲಕ ತೆಲುಗು ಪ್ರೇಕ್ಷರ ಮನಸೆಳೆದಿದ್ದ ಸಾಯಿ ಈಗ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ರೋಮ್ಯಾಂಟಿಕ್ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಜೊತೆಯಾಗುತ್ತಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಶೇಖರ್ ಖಮ್ಮುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ‘ಫಿದಾ’ ಚಿತ್ರದ ಮೂಲಕ ಸಾಯಿ ಪಲ್ಲವಿ ಅವರನ್ನು ತೆಲುಗು ಚಿತ್ರರಂಗಕ್ಕೆ ಕರೆ ತಂದ ನಿರ್ದೇಶಕ ಶೇಖರ್, ಈಗ ಎರಡನೆ ಬಾರಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.