Sunday, August 9, 2026

BDA Apartments

Home Front Page ನಾನು ಡೌನ್ ಆಗಿಲ್ಲ: ಡೌನ್ ಆಗೋ ಮಗ ಅಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…..

ನಾನು ಡೌನ್ ಆಗಿಲ್ಲ: ಡೌನ್ ಆಗೋ ಮಗ ಅಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…..

ವಿಜಯಪುರ,ಡಿಸೆಂಬರ್,2,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಡೌನ್ ಆಗಿಲ್ಲ. ಡೌನ್ ಆಗೋ ಮಗ ಆಲ್ಲ. ಯಾರು ಮಂತ್ರಿ ಆಗ್ತಾರೆ ಹೇಗೆ ಆಗ್ತಾರೆ ಅಂತಾ ಗೊತ್ತು. ಹೊಸ ಸಂಪುಟ ಮಾಡಲಿ ಆಮೇಲೆ ಹೇಳ್ತೀನಿ ಎಂದು ಗುಡುಗಿದ್ದಾರೆ.logo-justkannada-mysore

ವಿಜಯಪುರದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿಲ್ಲ. ಹೊಸ ಸಂಪುಟ ವಿಸ್ತರಣೆಯಾಗಲಿ. ಆಮೇಲೆ ಮಾತನಾಡುತ್ತೇನೆ ಎಂದರು.i-am-not-down-down-cabinet-expension-mla-basanagowda-patil-yatnal

ಲವ್ ಜಿಹಾದ್ ಬಗ್ಗೆ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಪಕ್ಷವೇ ಕ್ರಾಸ್ ಬ್ರೀಡ್. ಸಿದ್ಧರಾಮಯ್ಯ ಒಳ್ಳೆಯ ನಾಯಕರು. ಆದರೆ ಈ ರೀತಿ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದರು.

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಇದೊಂದು ದೊಡ್ಡ ಕಥೆ. ಎಲ್ಲಾ ಘಟನಾವಳಿಗಳು ನನಗೆ ಗೊತ್ತಿದೆ.  ಕಾಲ ಬಂದಾಗ ನಾನೇ ಎಲ್ಲವನ್ನು ಹೇಳುತ್ತೇನೆ. ಮೊದಲು ಸಂಪುಟ ವಿಸ್ತರಣೆಯಾಗಲಿ. ಅಮೇಲೆ ಹೇಳ್ತೀನಿ ಎಂದರು.

Key words:  I am not down- Down-cabinet expension- mla-Basanagowda Patil Yatnal ..