ಇಂದಿರಾ ಗಾಂಧಿ, ಸೋನಿಯಾ, ಪ್ರಿಯಾಂಕಾ ಕ್ರಾಸ್ ಬೀಡಾ..?- ಸಿದ್ಧರಾಮಯ್ಯ ವಿರುದ್ದ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ…

ಶಿವಮೊಗ್ಗ,ಡಿಸೆಂಬರ್,2,2020(www.justkannada.in):  ಲವ್ ಜಿಹಾದ್ ಕಾಯ್ದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ  ವಿವಾದಾತ್ಮಕ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.logo-justkannada-mysore

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್  ಈಶ್ವರಪ್ಪ, ಲವ್ ಜಿಹಾದ್ ವಿಚಾರದಲ್ಲಿ ಸಿದ್ದರಾಮಯ್ಯ ಕ್ರಾಸ್ ಬೀಡ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಹೆಣ್ಣುಮಕ್ಕಳು, ಮೊಮ್ಮಗಳು ಇಲ್ಲ. ಅದಕ್ಕೆ ಅವರಿಗೆ ನೋವು ಅರ್ಥವಾಗಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಕ್ರಾಸ್ ಬೀಡಾ? ಎಂದು ಪ್ರಶ್ನಿಸಿದರು.

ಹೆಣ್ಣೆಂದರೆ ಕೇವಲ ಕಾಮದ ವಸ್ತು ಎಂದುಕೊಂಡಿದ್ದೀರಾ ಎಂದು ಹರಿಹಾಯ್ದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಇಂತಹ ಪದ ಬಳಕೆ ಮಾಡಲು ನಾಚಿಕೆಯಾಗಬೇಕು. ಅವರು ಕಾಂಗ್ರೆಸ್ ನಲ್ಲಿರಲು ಅಯೋಗ್ಯರು ಎಂದು ಟೀಕಿಸಿದರು. shivamogga-minister- ks eshwarappa- former cm-Siddaramaiah

ಇದೇ ವೇಳೆ ಮುದಿ ಹಸುವನ್ನು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಿಮ್ಮ ತಾಯಿಗೆ ವಯಸ್ಸಾಗಿದೆ ಎಂದು ಏನು ಮಾಡುತ್ತೀರಿ?  ಗೋವು ನಮಗೆ ತಾಯಿ  ಇದ್ದಂತೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ  ವಾಗ್ದಾಳಿ ನಡೆಸಿದರು.

Key words: shivamogga-minister- ks eshwarappa- former cm-Siddaramaiah