Tuesday, September 22, 2026

BDA Apartments

ಸಿ.ಪಿ ಯೋಗೇಶ್ವರ್ ಮಂತ್ರಿ ಮಾಡ್ತೀವಿ ಎಂಬ ಹೇಳಿಕೆ ವಿಚಾರ: ಸಿಎಂ ಬಿಎಸ್ ವೈ ಮನವ...
Home Front Page ಸಿ.ಪಿ ಯೋಗೇಶ್ವರ್ ಮಂತ್ರಿ ಮಾಡ್ತೀವಿ ಎಂಬ ಹೇಳಿಕೆ ವಿಚಾರ: ಸಿಎಂ ಬಿಎಸ್ ವೈ ಮನವೊಲಿಕೆಗೆ ಮುಂದಾದ...

ಸಿ.ಪಿ ಯೋಗೇಶ್ವರ್ ಮಂತ್ರಿ ಮಾಡ್ತೀವಿ ಎಂಬ ಹೇಳಿಕೆ ವಿಚಾರ: ಸಿಎಂ ಬಿಎಸ್ ವೈ ಮನವೊಲಿಕೆಗೆ ಮುಂದಾದ ಶಾಸಕ ರೇಣುಕಾಚಾರ್ಯ…

ಬೆಂಗಳೂರು,ಡಿಸೆಂಬರ್,1,2020(www.justkannada.in):  ನೂರಕ್ಕೆ ನೂರರಷ್ಟು ಸಿ.ಪಿ ಯೋಗೇಶ್ವರ್ ರನ್ನ ಮಂತ್ರಿ ಮಾಡ್ತೀವಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿಎಂ  ಬಿಎಸ್ ವೈ ಮನವೊಲಿಕೆ ಮಾಡುತ್ತೇವೆ ಎಂದಿದ್ದಾರೆ.logo-justkannada-mysore

ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿಎಂ ಪರಮಾಧಿಕಾರ ಪ್ರಶ್ನಿಸಲ್ಲ. ಆದರೇ ಮತ್ತೊಮ್ಮೆ ಸಿಎಂ ಹಾಗೂ ವರಿಷ್ಠರನ್ನ ಭೇಟಿಯಾಗಿ ಚರ್ಚಿಸುತ್ತೇವೆ. ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮನವೊಲಿಸಲು ಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.cp-yogeshwar-minister-mp-renukacharya-cm-bs-yeddyurappa

ಸೋತವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಸಿ.ಪಿ ಯೋಗೇಶ್ವರ್ ಪರ ಬ್ಯಾಟ್ ಬೀಸಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದರು. ಸೋತವರಿಗೆ ಮಂತ್ರಿ ಮಾಡುವುದಾದರೇ ತ್ಯಾಗ ಮಾಡಲಿ ಎಂದು ಪರೋಕ್ಷ ಟಾಂಗ್ ನೀಡಿದ್ದರು. ಆದರೇ ಶಾಸಕರ ಒತ್ತಡಕ್ಕೆ ಮಣಿಯದ ಸಿಎಂ ಬಿಎಸ್ ವೈ  ಸಿಪಿ ಯೋಗೇಶ್ವರ್ ರನ್ನ ಮಂತ್ರಿ ಮಾಡುವುದಾಗಿ ತಿಳಿಸಿದ್ದಾರೆ.

Key words: CP Yogeshwar- Minister –MP-Renukacharya-CM BS yeddyurappa