ಮೈಸೂರು, ನವೆಂಬರ್ 28, 2020 (www.justkannada.in): ಇತ್ತೀಚಿಗೆ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಆರಂಭವಾಗಿದೆ.
ಕನ್ನಡ ಗ್ರಾಹಕರ ಕೂಟ ಮನವಿ ಹೀಗಿತ್ತು…ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಅಭೂತಪೂರ್ವ ಯಶಸ್ಸು ಕಾಣುತ್ತಿರುವುದು ನಮಗೆಲ್ಲ ತಿಳಿದೇ ಇದೆ. ಈ ವಾಹಿನಿಯನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಸಮಾನಮನಸ್ಕ ಕನ್ನಡ ಗ್ರಾಹಕರ ಕೊಡುಗೆ ಬಹಳ ಇದೆ.
ಇನ್ನಷ್ಟು ಕ್ರೀಡಾ ವಾಹಿನಿಗಳು ಕನ್ನಡದಲ್ಲಿ ಬರುವಂತೆ ಮಾಡುವುದು ನಮ್ಮ ಮುಂದಿನ ಗುರಿ ಆಗಬೇಕಿದೆ. ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಯಂತೆ ಸೋನಿ ಸ್ಪೋರ್ಟ್ಸ್ ಸಂಸ್ಥೆಯೂ ಅನೇಕ ಪಂದ್ಯಾವಳಿಗಳನ್ನು ಪ್ರದರ್ಶನ ಮಾಡುತ್ತದೆ.
ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಸೋನಿ ಸಂಸ್ಥೆಯ ವತಿಯಿಂದ ಪ್ರಸಾರ ಆಗಲಿದೆ. ಕನ್ನಡದಲ್ಲಿ ಕಾಮೆಂಟರಿ ಕೊಡಬೇಕೆಂದು ಅವರನ್ನು ಒತ್ತಾಯಿಸೋಣ. ಕನ್ನಡ ಕಾಮೆಂಟರಿ ಮೂಲಕ ಯೋಜನೆ ಶುರುವಾದರೆ ಮುಂದೊಂದು ದಿನ ಕನ್ನಡದ್ದೇ ವಾಹಿನಿ ಯಾಗಿ ಹೊರಹೊಮ್ಮುವ ವ್ಯವಸ್ಥೆ ಬರಬಹುದು. ಮೊದಲ ಹೆಜ್ಜೆಯಾಗಿ ಕನ್ನಡದಲ್ಲಿ ಕಾಮೆಂಟರಿ ಒತ್ತಾಯಿಸೋಣ.
ನಮ್ಮ ಟ್ವಿಟರ್ ಅಭಿಯಾನವನ್ನು ಬೆಂಬಲಿಸಿ






