Saturday, October 17, 2026

Dasara Wishes

Happy Dasara
Home Cinema ಜನವರಿಯಲ್ಲಿ ಸೆಟ್ಟೇರಲಿದೆ ಬೆಲ್ ಬಾಟಂ-2

ಜನವರಿಯಲ್ಲಿ ಸೆಟ್ಟೇರಲಿದೆ ಬೆಲ್ ಬಾಟಂ-2

ಬೆಂಗಳೂರು, 17 ನವೆಂಬರ್ 2020: ಚಿತ್ರ ರಸಿಕರ ಗಮನ ಸೆಳೆದ ಬೆಲ್ ಬಾಟಂ 2ಗೆ ಸಿದ್ಧತೆ ನಡೆದಿದೆ.

ಹೌದು. ಇದೀಗ ಎರಡನೇ ಭಾಗ ಜನವರಿಯಲ್ಲಿ ಸೆಟ್ಟೇರುವುದು ಖಚಿತ ಎನ್ನಲಾಗಿದೆ. ರಿಷಬ್ ಶೆಟ್ಟಿಗೆ ನಾಯಕ ನಟನಾಗಿ ಬಡ್ತಿ ನೀಡಿದ ಸಿನಿಮಾ ಬೆಲ್ ಬಾಟಂ. ಈ ಸಿನಿಮಾದ ಎರಡನೇ ಭಾಗ ಮಾಡುವುದಾಗಿ ಶೆಟ್ಟರು ಈಗಾಗಲೇ ಘೋಷಿಸಿದ್ದರು.

ಒಂದನೇ ಭಾಗದಲ್ಲಿದ್ದ ಕಥಾಪಾತ್ರಗಳೊಂದಿಗೇ ನಿರ್ದೇಶಕ ಜಯತೀರ್ಥ ಎರಡನೇ ಭಾಗವನ್ನು ಮಾಡಲು ಹೊರಟಿದ್ದಾರೆ. ಆದರೆ ಕಳೆದ ಬಾರಿಗಿಂತ ಕೊಂಚ ದೊಡ್ಡ ಮಟ್ಟದಲ್ಲೇ ಎರಡನೇ ಭಾಗ ಸಿನಿಮಾ ಮಾಡಲಿದ್ದಾರಂತೆ.

ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿಯೂ ನಡೆದಿದೆ.