Monday, October 5, 2026

BDA Apartments

ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿಕೊಟ್ಟ ನಟ ಜಗ್ಗೇಶ್ BDA JK_Adv BDA Adv
Home Front Page ನಾಳೆ ವಸತಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾ ಪ್ರವಾಸ

ನಾಳೆ ವಸತಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ನವೆಂಬರ್,12,2020(www.justkannada.in) : ವಸತಿ ಸಚಿವ ವಿ.ಸೋಮಣ್ಣ ಅವರು ನವೆಂಬರ್ 13ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

kannada-journalist-media-fourth-estate-under-loss

ನಾಳೆ ಬೆಳಿಗ್ಗೆ 8.30 ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವರು, ಬಳಿಕ 9 ಗಂಟೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರಿನಲ್ಲಿ ವಸತಿ ಇಲಾಖೆ ವತಿಯಿಂದ ಕೈಗೊಳ್ಳಲಾದ ವಸತಿ ಯೋಜನೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗುವರು.

ಬೆಳಿಗ್ಗೆ 10 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡುವ ಸಚಿವ ಸೋಮಣ್ಣ ಅವರು, ಬೆಳಿಗ್ಗೆ 11ಕ್ಕೆ ಇಲವಾಲದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸಿರುವ ಕೆ.ಆರ್.ಎಸ್.ನಿಸರ್ಗ ವಸತಿ ಬಡಾವಣೆಗೆ ಭೂಮಿ ನೀಡಿರುವ ಭೂಮಾಲೀಕರಿಗೆ ಸಾಂತ್ವನ ನಿವೇಶನ ವಿತರಣಾ ಸಮಾರಂಭದಲ್ಲಿ ಭಾಗವಹಿಸುವರು.

ಬಳಿಕ ಮಧ್ಯಾಹ್ನ 2.30ಕ್ಕೆ ಅಶೋಕಪುರಂನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿ ಪರಿವೀಕ್ಷಣೆ ಮಾಡುವರು.

ಮಧ್ಯಾಹ್ನ 3.30 ಕ್ಕೆ ನಂಜನಗೂಡಿಗೆ ಆಗಮಿಸುವ ಸೋಮಣ್ಣ ಅವರು, ಎಸ್.ಎಂ.ಪಿ ಡೆವಲಪರ್ಸ್, ಮೈಸೂರು ಇವರು ನಂಜನಗೂಡಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ ಮಧ್ಯಾಹ್ನ 4 ಗಂಟೆಗೆ ನಂಜನಗೂಡಿನಿಂದ ಶ್ರೀರಂಗಪಟ್ಟಣಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.Housing,Minister,V.Somanna,tour,Mysore,district,tomorrow

key words : Housing-Minister-V.Somanna-tour-Mysore-district-tomorrow