Wednesday, August 12, 2026

BDA Apartments

Home Cinema ಕಾಮನ್ ಡಿಪಿ ಶೇರ್ ಮಾಡುವ ಮೂಲಕ ಕಮಲ್ ಹಾಸನ್’ಗೆ ಬರ್ತ್ ಡೇ ವಿಶ್ ಮಾಡಿದ ಫ್ಯಾನ್ಸ್

ಕಾಮನ್ ಡಿಪಿ ಶೇರ್ ಮಾಡುವ ಮೂಲಕ ಕಮಲ್ ಹಾಸನ್’ಗೆ ಬರ್ತ್ ಡೇ ವಿಶ್ ಮಾಡಿದ ಫ್ಯಾನ್ಸ್

ಬೆಂಗಳೂರು, 07, ನವೆಂಬರ್ 2020: ಬಹುಭಾಷಾ ನಟ ಕಮಲ್‌ ಹಾಸನ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಹೌದು. ಕಮಲ್‌ ಹಾಸನ್‌ ಅವರು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಎಲ್ಲರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಕೋವಿಡ್‌-19 ಹರಡುವ ಭೀತಿಯಿಂದ ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಕೆಲವೇ ದಿನಗಳ ಹಿಂದೆ ಅಭಿಮಾನಿಗಳು ಈ ಬಾರಿ ಕಮಲ್‌ ಜನ್ಮದಿನಕ್ಕಾಗಿ ಕಾಮನ್‌ ಡಿಪಿ ಸಿದ್ಧಪಡಿಸಿದ್ದರು. ಅದನ್ನು ಕಮಲ್‌ ಪುತ್ರಿ ಶ್ರುತಿ ಹಾಸನ್‌ ಬಿಡುಗಡೆ ಮಾಡಿದ್ದರು.

ಕಾಮನ್‌ ಡಿಪಿ ಶೇರ್‌ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಅಭಿಮಾನಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ತಂದೆಗೆ ಶ್ರುತಿ ಹಾಸನ್‌ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.