Saturday, October 17, 2026

Dasara Wishes

Happy Dasara
Home Cinema ಆರ್.ಆರ್ ನಗರದಲ್ಲಿ ಇಂದು ನಟ ದರ್ಶನ್ ಪ್ರಚಾರ…

ಆರ್.ಆರ್ ನಗರದಲ್ಲಿ ಇಂದು ನಟ ದರ್ಶನ್ ಪ್ರಚಾರ…

ಬೆಂಗಳೂರು,ಅಕ್ಟೋಬರ್,29,2020(www.justkannada.in):  ಆರ್.ಆರ್ ನಗರ ಉಪಚುನಾವಣಾ ಕಣ ಸಾಕಷ್ಟು ರಂಗೇರಿದ್ದು, ಮೂರು ಪಕ್ಷದ ನಾಯಕರು ಭರ್ಜರಿ ಮತಬೇಟೆಗಿಳಿದಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಿನ್ನೆಯಷ್ಟೇ ನಟಿ ಖುಷ್ಬೂ ಅವರು ಪ್ರಚಾರ ನಡೆಸಿದ್ದರು. ರೋಡ್ ಶೋ ಮೂಲಕ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದರು. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೋಡ್ ಶೋ ನಡೆಸಿ ಪ್ರಚಾರ  ನಡೆಸಲಿದ್ದಾರೆ ಎನ್ನಲಾಗಿದೆ.actor-darshan-campaign-today-rr-nagar

ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿ ಪಾಳ್ಯದಲ್ಲಿ ನಟ ದರ್ಶನ್  ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್​ ಪ್ರಚಾರದಿಂದ ಆರ್​ಆರ್​ ನಗರ ಇಂದು ಮತ್ತಷ್ಟು ರಂಗೇರಲಿದೆ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಟ ದರ್ಶನ್  ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದರು.

Key words: Actor -Darshan -campaign -today – RR nagar