ಅದ್ಧೂರಿಯಾಗಿ ನಡೆದ ಹಬ್ಬಗಳ ಹಬ್ಬ ‘ಜೀ ಕುಟುಂಬ ಅವಾರ್ಡ್ಸ್ 2020’: ಇದೇ ಶನಿವಾರ ಈ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ…

ಬೆಂಗಳೂರು,ಅಕ್ಟೋಬರ್,29,2020(www.justkannada.in): ಈ ವರ್ಷದ ಎಲ್ಲಾ ಏಳುಬೀಳುಗಳ ನಡುವೆ ಒಂದು ಮಹತ್ವಪೂರ್ಣ, ಸಕಾರಾತ್ಮಕ ಹಾಗೂ ವಿನೋದಮಯ ಮನರಂಜನೆಯ ಕಾರ್ಯಕ್ರಮ “ಜೀ ಕುಟುಂಬ ಅವಾರ್ಡ್ಸ್ 2020” ಅನ್ನು ಜೀ ಕನ್ನಡ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.zee-family-awards-2020-festival-october-31-november-1

ಈ ಹಬ್ಬದ ಮೂಲಕ ನಿಮ್ಮ ನೆಚ್ಚಿನ ಜೀ ಕುಟುಂಬ ಅವಾರ್ಡ್ಸ್ ಮತ್ತೆ ಬಂದಿದೆ. ಈ ವರ್ಷ ಕೂಡಾ ನಿಮ್ಮ ನೆಚ್ಚಿನ ತಾರೆಗಳಿಗೆ ಅವರ ಸಾಧನೆಗಳಿಗೆ ಗೌರವ ಸಲ್ಲಿಸಲಾಗಿದೆ ಮತ್ತು ಅವರ ಸಾಧನೆ ಮುಂದುವರಿಸಲು ಅವರನ್ನು ಉತ್ತೇಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ನಿಮ್ಮ ನೆಚ್ಚಿನ ಜೀ ಕುಟುಂಬದ ಎಲ್ಲ ತಾರೆಯರೂ ಸಂಭ್ರಮದಿಂದ ಭಾಗವಹಿಸಿದ್ದರು. ಅವರಿಗೆಂದೇ ವಿಶೇಷವಾದ `ಕಾರ್ನಿವಾಲ್’ ಥೀಮ್ ಹೊಂದಿದ ರೆಡ್ ಕಾರ್ಪೆಟ್ ಸಿದ್ಧಪಡಿಸಲಾಗಿತ್ತು. ಈ ರೆಡ್ ಕಾರ್ಪೆಟ್ ನಲ್ಲಿ ಜಗಮಗಿಸುವ ಬೆಳಕಿನಲ್ಲಿ ಜೀ ಕುಟುಂಬದ ತಾರೆಯರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ರೆಡ್ ಕಾರ್ಪೆಟ್ ಅನ್ನು ನಯನಾ ಹಾಗೂ ಚೈತ್ರಾ ವಾಸುದೇವನ್ ಬಂದ ಕಲಾವಿದರನ್ನು ಸ್ವಾಗತಿಸಿ ರಂಜಿಸಿದರು.

ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಒಟ್ಟು 44 ಪ್ರಶಸ್ತಿ ವಿಭಾಗಗಳಿದ್ದು ಅವುಗಳಲ್ಲಿ ಆರು ಜನಪ್ರಿಯ ವಿಭಾಗಗಳನ್ನು ಜನರ ಮೂಲಕ ಪ್ರಶಸ್ತಿ ಆಯ್ಕೆ ಮಾಡಲು ವಾಹಿನಿ ನಿರ್ಧರಿಸಿತ್ತು. ಈ ಆರು ವಿಭಾಗಗಳನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪಿದ ರಸಿಕರ ಎಕ್ಸ್ ಪ್ರೆಸ್ ಜನರ ಹತ್ತಿರ ಸುರಕ್ಷಿತ ಹಾಗೂ ಎಚ್ಚರಿಕೆಯನ್ನು ಅನುಸರಿಸಿ ಈ ಮತಗಳನ್ನು ಸಂಗ್ರಹಿಸಿತು. ಇದರ ಜೊತೆಯಲ್ಲಿ ಎಸ್.ಎಂ.ಎಸ್ ಮತ್ತು ಆಪ್ ಮೂಲಕ ಕೂಡಾ ವೋಟಿಂಗ್ ನಡೆಸಲಾಯಿತು. ಈ ಎಲ್ಲ ಪ್ರಕ್ರಿಯೆಯಲ್ಲೂ ಜೀ ವಾಹಿನಿ ಕೋವಿಡ್ ಮುನ್ನೆಚ್ಚರಿಕೆಗಳನ್ನು ವಹಿಸಿತ್ತು.zee-family-awards-2020-festival-october-31-november-1

ಇದೇ ಶನಿವಾರ ಸಂಜೆ 6:00ಗಂಟೆಗೆ ಜೀ ಕುಟುಂಬ ಅವಾರ್ಡ್ಸ್ ರೆಡ್ ಕಾರ್ಪೆಟ್ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ.

ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಕೊರೊನಾ ವಾರಿಯರ್ ಆಗಿ ಬಂದು ಪ್ರಶಸ್ತಿ ನೀಡಿದರು. ಅವೇರ್ ನೆಸ್ ಬ್ರಾಂಡ್ ರಾಯಭಾರಿ ಆಗಿರುವ ರಮೇಶ್ ಅರವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಟರಾದ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ಹಿರಿಯ ನಟ ಚರಣ್ ರಾಜ್, ಜೈ ಜಗದೀಶ್, ಮೋಹನ್, ನಿಶ್ವಿಕಾ ನಾಯ್ಡು ಮುಂತಾದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಮಹಾನಾಯಕ ಸಂಭ್ರಮಿಸಿದ ಮಹಾವೇದಿಕೆ

ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಯಶಸ್ಸು ಕಂಡ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿಯನ್ನು ಮನೆ ಮನೆಗಳಲ್ಲೂ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಗಂಟೆಗೆ ಕಾಯುತ್ತಿರುತ್ತಾರೆ. ಈ ಸಂಭ್ರಮಕ್ಕೆ ಈ ಬಾರಿ ಖ್ಯಾತ ನಟ ಯಶ್ ಸಾಥ್ ನೀಡಿದರು. ಅವರು ಸ್ವತಃ ಕಾರ್ಯಕ್ರಮಕ್ಕೆ ಬಂದು ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಮತ್ತೊಂದು ಹೊಸ ಹಾಡನ್ನು ಬಿಡುಗಡೆ ಮಾಡಿದರು. ಧಾರಾವಾಹಿಯನ್ನು ಊರು ಊರುಗಳಲ್ಲಿ ಸಂಭ್ರಮಿಸಿದ, ಬ್ಯಾನರ್ ಕಟ್ಟಿ ಸಂಭ್ರಮಿಸಿದ ಕುರಿತಾಗಿ ವಿಶೇಷ ವಿ.ಟಿ. ಪ್ರಸಾರ ಮಾಡಲಾಯಿತು. ಅದರಲ್ಲಿ ಮಹಾನಾಯಕ ಧಾರಾವಾಹಿಯ ಪಾತ್ರಧಾರಿಗಳು ಕನ್ನಡದಲ್ಲಿ ಮಾತನಾಡಿ ಸಂಭ್ರಮಿಸಿದರು. ಇದರೊಂದಿಗೆ ಮಹಾನಾಯಕ ಧಾರಾವಾಹಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸಾಥ್ ನೀಡಿದರು.

ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಪಾರು ಮತ್ತು ಆದಿತ್ಯ ಅವರ ಅದ್ಧೂರಿ ವಿವಾಹ

ಜೀ ಕುಟುಂಬ ಅವಾರ್ಡ್ಸ್ ವೇದಿಕೆಯ ಮೇಲೆ ಪಾರು ಮತ್ತು ಆದಿತ್ಯ ಅವರ ಅದ್ಧೂರಿ ವಿವಾಹ ನಡೆಸಲಾಯಿತು. ಈ ವಿವಾಹದಲ್ಲಿ ಎಲ್ಲ ಧಾರಾವಾಹಿಗಳ ನಟ, ನಟಿಯರೂ ಉತ್ಸಾಹದಿಂದ ಭಾಗವಹಿಸಿ, ಹಾಡಿ ಕುಣಿದು ಸಂಭ್ರಮಿಸಿದರು. ಪಾರು, ಆದಿತ್ಯ ವಿವಾಹ ಸಂಭ್ರಮವನ್ನೂ ಜೀ ವೀಕ್ಷಕರು ಜೀ ಕನ್ನಡ ವಾಹಿನಿಯ ಈ ವಿಶೇಷ ಪ್ರಸಾರದಲ್ಲಿ ಕಣ್ಣು ತುಂಬಿಕೊಳ್ಳಬಹುದು.

ಈ ಎಲ್ಲ ಸಂಭ್ರಮವನ್ನು ನಿಮ್ಮ ಕಣ್ಣು ತುಂಬಿಕೊಳ್ಳಲು ಇದೇ ಅಕ್ಟೋಬರ್ 31 ಹಾಗೂ ನವೆಂಬರ್ 1ರ ಶನಿವಾರ ಮತ್ತು ಭಾನುವಾರ ಸಂಜೆ 7:00ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡಕ್ಕೆ ಟ್ಯೂನ್ ಆಗಿರಿ.

Key words: Zee Family Awards-2020-festival-october 31-november 1