Sunday, August 23, 2026

BDA Apartments

Home Cinema ದರ್ಶನ್ ನೆರವಿಗೆ ಮನವಿ ಮಾಡಿದ ಥ್ರೋ ಬಾಲ್ ಆಟಗಾರ್ತಿ !

ದರ್ಶನ್ ನೆರವಿಗೆ ಮನವಿ ಮಾಡಿದ ಥ್ರೋ ಬಾಲ್ ಆಟಗಾರ್ತಿ !

ಬೆಂಗಳೂರು, ಜೂನ್ 15, 2019 (www.justkannada.in): ಖ್ಯಾತ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಡಿ ಬಾಸ್ ದರ್ಶನ್ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಭಾರತ ಥ್ರೋ ಬಾಲ್ ತಂಡದ ನಾಯಕಿಯಾಗಿರುವ ಕೃಪಾ ಜೆಪಿ ದರ್ಶನ್ ಅಭಿಮಾನಿಯೂ ಆಗಿದ್ದು ಇದೀಗ ನಟನ ಬಳಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಖ ಆಟಗಾರರಿದ್ದಾರೆ. ಅವರು ಥ್ರೋ ಬಾಲ್ ಕ್ರೀಡೆಯಲ್ಲಿ ಮುಂದೆ ಬರಲು ಇಚ್ಚಿಸುತ್ತಿದ್ದಾರೆ.ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನೀವು ಕ್ರೀಡೆ, ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.