Tuesday, August 18, 2026

BDA Apartments

Home Cinema ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕೆ ಸ್ಟಾರ್ಸ್ ಮಕ್ಕಳ ಎಂಟ್ರಿ

ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕೆ ಸ್ಟಾರ್ಸ್ ಮಕ್ಕಳ ಎಂಟ್ರಿ

ಬಿಹಾರ, ಅಕ್ಟೋಬರ್ 16, 2020 (www.justkannada.in): ಮಾಜಿ ಸಂಸದ ಶತ್ರುಘ್ನ ಸಿನ್ಹಾರ ಪುತ್ರ ಲವ್ ಸಿನ್ಹಾರನ್ನು ಬಂಕಿಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಹೌದು. ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕೆ ಸ್ಟಾರ್ ನಟನ ಪುತ್ರ ಧುಮುಕಿದ್ದಾರೆ.
ಜೆಡಿಯು ನಾಯಕ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್‌ ಬಿಹಾರಿಗಂಜ್‌ ಕ್ಷೇತ್ರದಿಂದ ಸ್ಫರ್ಧೆಗಿಳಿಯಲಿದ್ದಾರೆ.

ಸುಭಾಷಿಣಿ ಹಾಗೂ ಲೋಕ್ ಜನಶಕ್ತಿ ಪಾರ್ಟಿಯ ಕಾಲಿ ಪಾಂಡೆ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದರು. ನವೆಂಬರ್‌ 3 & 7ರಂದು ನಡೆಯಲಿರುವ ಮತದಾನ ಎರಡನೇ ಹಂತಕ್ಕೆ ಮೇಲ್ಕಂಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.