Sunday, August 30, 2026

BDA Apartments

Home Front Page ಆರೋಗ್ಯ ಖಾತೆ ಅತ್ಯುತ್ತಮವಾಗಿ ನಿಭಾಯಿಸುವೆ-ಸಚಿವ ಸುಧಾಕರ್ ವಿಶ್ವಾಸ…

ಆರೋಗ್ಯ ಖಾತೆ ಅತ್ಯುತ್ತಮವಾಗಿ ನಿಭಾಯಿಸುವೆ-ಸಚಿವ ಸುಧಾಕರ್ ವಿಶ್ವಾಸ…

ಬೆಂಗಳೂರು,ಅಕ್ಟೋಬರ್,12,2020(www.justkannada.in):  ಸಚಿವ ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನೀಡಲು ಸಿಎಂ ಬಿಎಸ್ ಯಡಿಯೂರಪ್ಪ  ಮುಂದಾಗಿದ್ದಾರೆ.jk-logo-justkannada-logo

ಈ ಸಂಬಂಧ ಮಾತನಾಡಿರುವ ಸಚಿವ ಸುಧಾಕರ್. ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. 2013ರಲ್ಲಿ ಎರಡು ಇಲಾಖೆಯನ್ನ ಬೇರ್ಪಡಿಸಲಾಗಿತ್ತು. ಈಗ ಆರೋಗ್ಯ ಇಲಾಖೆ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಹೀಗಾಗಿ ಎರಡೂ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.health-department-best-handle-minister-k-sudhakar-confidence

ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ. ಮಾಧ್ಯಮಗಳಲ್ಲಿ ಭ್ರಷ್ಟಚಾರದ ಬಗ್ಗೆ ಸುದ್ದಿಯಾಗಿದೆ. ನಾನು ಖಾತೆ ವಹಿಸಿಕೊಂಡ ನಂತರ ಈ ಬಗ್ಗೆ ಪರಾಮರ್ಶೆ ಮಾಡುತ್ತೇನೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Health department- best handle-Minister –k.Sudhakar -confidence.