Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page  ಆರ್ ಆರ್ ನಗರ ಮತ್ತು ಶಿರಾ ಬೈ ಎಲೆಕ್ಷನ್ ಗೆ ಡೇಟ್ ಫಿಕ್ಸ್…

 ಆರ್ ಆರ್ ನಗರ ಮತ್ತು ಶಿರಾ ಬೈ ಎಲೆಕ್ಷನ್ ಗೆ ಡೇಟ್ ಫಿಕ್ಸ್…

ಬೆಂಗಳೂರು,ಸೆಪ್ಟಂಬರ್,29,2020(www.justkannada.in):  ರಾಜ್ಯದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ  ಉಪಚುನಾವಣಾ ದಿನಾಂಕ ನಿಗದಿಯಾಗಿದೆ.jk-logo-justkannada-logo

ಎರಡು ಕ್ಷೇತ್ರಗಳಿಗೆ  ನವೆಂಬರ್ 3ರಂದು  ಮತದಾನ ನಡೆಯಲಿದ್ದು , ನವೆಂಬರ್ 10ರಂದು  ಫಲಿತಾಂಶ ಹೊರಬೀಳಲಿದೆ. ಅಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕವಾಗಿದೆ.

ಅಕ್ಟೋಬರ್ 19ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯೊಂದಿಗೆ ಈ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.Date -fix - RR nagar- Shira -by election.

ರಾಜರಾಜೇಶ್ವರಿ ನಗರ ಶಾಸಕರಾಗಿದ್ದ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಸ್ಥಾನ ತೆರವಾಗಿತ್ತು. ಸತ್ಯನಾರಾಯಣ್ ಅವರ  ನಿಧನದಿಂದ  ಶಿರಾ ಕ್ಷೇತ್ರ ಸ್ಥಾನ ತೆರವಾಗಿತ್ತು.

Key words: Date -fix – RR nagar- Shira -by election.