ಶಾಲೆ ಆರಂಭದ ಬಗ್ಗೆ ಶಾಸಕರಿಗೆ ಪತ್ರ ವಿಚಾರ: ಸಚಿವ ಸುರೇಶ್ ಕುಮಾರ್ ನಡೆಗೆ ಸ್ವಪಕ್ಷದವರೇ ಆದ ಹೆಚ್.ವಿಶ್ವನಾಥ್ ಅಸಮಾಧಾನ…

ಮೈಸೂರು,ಸೆಪ್ಟಂಬರ್,29,2020(www.justkannada.in): ಶಾಲೆ ಆರಂಭದ ಬಗ್ಗೆ ಅಭಿಪ್ರಾಯ ಪಡೆಯಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್  ಕುಮಾರ್ ಅವರು ಶಾಸಕರಿಗೆ ಪತ್ರ ಬರೆದ ವಿಚಾರ ಕುರಿತು ಸ್ವಪಕ್ಷದವರೇ ಆದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ.jk-logo-justkannada-logo

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ವಿಧಾಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇದು ಜನಪ್ರತಿನಿಧಿಗಳ ತೀರ್ಮಾನ ಆಗಬಾರದು. ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡಬೇಡಿ. ಯಾವ ಜನಪ್ರತಿನಿಧಿಯೂ ಚುನಾವಣೆ ವೇಳೆ ಶಿಕ್ಷಣದ ಬಗ್ಗೆ ಚರ್ಚೆಯೇ ಮಾಡಿಲ್ಲ. ಎಲ್ಲ ಜನಪ್ರತಿನಿಧಿಗಳಿಗೂ ಶಿಕ್ಷಣದ ಬಗ್ಗೆ ಎಲ್ಲ ಮಾಹಿತಿ ಇರೋಲ್ಲ. ಹಾಗಾಗಿ ಅವರ ಸಲಹೆಯಿಂದ ಶಾಲೆ ಆರಂಭ ಮಾಡುವ ನಿರ್ಧಾರ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ನೀವು ಶಾಲೆ ಆರಂಭಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಾ ಅನ್ನೋದನ್ನ ಹೇಳಿ. ಎಲ್ಲವನ್ನು ಜನಪ್ರತಿನಿಧಿಗಳ ಮೇಲೆ ಹಾಕಬೇಡಿ.  ಶಿಕ್ಷಣ ಸಚಿವರಾಗಿ ಶಾಲೆ ಆರಂಭಕ್ಕೆ ಮಾಡಿಕೊಂಡಿರುವ ಸಿದ್ದತೆ ಬಗ್ಗೆ ಮೊದಲು ತಿಳಿಸಿ.  ಸುಮ್ಮನೆ ಒಂದು ಕಾಗದ ಬರೆದು ಕುಳಿತುಕೊಂಡರೆ ಅದು ಸರಿಯಲ್ಲ. ಇದು ಶಿಕ್ಷಣ ಮಂತ್ರಿಯೋಬ್ಬ ಮಾಡುವ ಕೆಲಸ ಅಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಬೇಡ. ಪೋಷಕರ ಮನಸ್ಸಿನ ಮೇಲೆ ಚೆಲ್ಲಾಟ ಶೋಭಾಯಮಾನವಲ್ಲ. ಎಂದು ಹೆಚ್. ವಿಶ್ವನಾಥ್ ತಿಳಿಸಿದರು.school-startup-mlc-h-vishwanath-minister-suresh-kumar

ಸುರೇಶ್ ಕುಮಾರ್ ಅವರೇ ನೀವು ಹೇಳಿಕೆ ಕೊಟ್ಟು ವಾಪಸ್ ಪಡೆದು ಗೊಂದಲ ಸೃಷ್ಟಿಸಬೇಡಿ. ನೀವು ಪೋಷಕರನ್ನ ಮಕ್ಕಳನ್ನ ಶಿಕ್ಷಕರನ್ನ ಗೊಂದಲದಲ್ಲಿ ಇಡಬೇಡಿ.  ಸರ್ಕಾರಿ ಶಾಲೆ ಜೊತೆ ಖಾಸಗಿ ಶಾಲೆ ಬಗ್ಗೆಯೂ ಯೋಚನೆ ಮಾಡಬೇಕು. ಎಲ್ಲವನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದು ಸಚಿವ ಸುರೇಶ್ ಕುಮಾರ್ ಗೆ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.

Key words: School- Startup-MLC-H. Vishwanath- Minister- Suresh Kumar