Monday, September 28, 2026

BDA Apartments

ಡ್ರಗ್ಸ್ ಪ್ರಕರಣಕ್ಕೆ ಪ್ರಿನ್ಸ್ ಮಹೇಶ್ ಬಾಬು ಪತ್ನಿ ನಮ್ರತಾ ಹೆಸರು ತಳುಕು ! B...
Home Cinema ಡ್ರಗ್ಸ್ ಪ್ರಕರಣಕ್ಕೆ ಪ್ರಿನ್ಸ್ ಮಹೇಶ್ ಬಾಬು ಪತ್ನಿ ನಮ್ರತಾ ಹೆಸರು ತಳುಕು !

ಡ್ರಗ್ಸ್ ಪ್ರಕರಣಕ್ಕೆ ಪ್ರಿನ್ಸ್ ಮಹೇಶ್ ಬಾಬು ಪತ್ನಿ ನಮ್ರತಾ ಹೆಸರು ತಳುಕು !

ಹೈದರಾಬಾದ್, ಸೆಪ್ಟೆಂಬರ್ 27, 2020 (www.justkannada.in):
ಡ್ರಗ್ಸ್ ಪ್ರಕರಣದಲ್ಲಿ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಹೆಸರು ಕೇಳಿ ಬಂದಿದೆ.

ಪ್ರಕರಣದಲ್ಲಿ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಹೆಸರು ಕೇಳಿಬರುತ್ತಿದ್ದಂತೆಯೇ ನಮ್ರತಾ ಶಿರೋಡ್ಕರ್ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಡ್ರಗ್ಸ್ ಕುರಿತಾಗಿ ಮಾತನಾಡಿದ ಕಾಮೆಂಟ್ಸ್ ಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡ ಜಯಾ ಸಾಹಾ ಅವರ ಬಳಿ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸಿಂಥೆಟಿಕ್ ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದರು. ಆದಕಾರಣ ನಮ್ರತಾ ಶಿರೋಡ್ಕರ್ ಹೆಸರನ್ನು ಜಯಾ ಸಾಹಾ ಎನ್ ಸಿಬಿ ಮುಂದೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಸ್ಟಾರ್ ನಟನ ಪತ್ನಿಯೊಬ್ಬರ ಹೆಸರು ಡ್ರಗ್ಸ್ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ.