Monday, September 28, 2026

BDA Apartments

Home Cinema ‘ಕಸ್ತೂರಿ ಮಹಲ್’ನಿಂದ ರಚಿತಾ ಔಟ್, ಸಾನ್ವಿ ಇನ್ !

‘ಕಸ್ತೂರಿ ಮಹಲ್’ನಿಂದ ರಚಿತಾ ಔಟ್, ಸಾನ್ವಿ ಇನ್ !

ಬೆಂಗಳೂರು, ಸೆಪ್ಟೆಂಬರ್ 27, 2020 (www.justkannada.in): ‘ಕಸ್ತೂರಿ ಮಹಲ್’ ಸಿನಿಮಾದಿಂದ ರಚಿತಾ ರಾಮ್ ಹೊರಬಂದ ಬಳಿಕ ಹೊಸ ನಾಯಕ ನಟಿಯ ಆಯ್ಕೆಯಾಗಿದೆ.

ಹೌದು. ರಚಿತಾ ಜಾಗಕ್ಕೆ ಹೊಸ ನಾಯಕಿಯಾಗಿ ಸಾನ್ವಿ ಬಂದಿದ್ದಾರೆ. ಕಸ್ತೂರಿ ಮಹಲ್ ಸಿನಿಮಾದ ನಾಯಕಿ ಪಾತ್ರಕ್ಕೆ ಈಗ ಸಾನ್ವಿ ಶ್ರೀವಾಸ್ತವ್ ಬಂದಿದ್ದಾರೆ. ಹಿರಿಯ ನಿರ್ದೇಶಕ ದಿನೇಶ್ ಬಾಬು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಹಿರಂಗ ಪಡಿಸಿರುವ ದಿನೇಶ್ ಬಾಬು, ಸಿನಿಮಾದಲ್ಲಿ ಸಾನ್ವಿ ನಟಿಸುತ್ತಿರುವುದು ಸಂತೋಷ ತಂದಿದೆ. ಇದು ನನ್ನ ಮೊದಲ ಕನ್ನಡದ ಹಾರರ್ ಸಿನಿಮಾವಾಗಲಿದೆ ಎಂದಿದ್ದಾರೆ.