Saturday, August 22, 2026

BDA Apartments

Home Front Page ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಿಎಂ ಬಿಎಸ್ ವೈ ಸಂತಾಪ…

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಿಎಂ ಬಿಎಸ್ ವೈ ಸಂತಾಪ…

ಬೆಂಗಳೂರು,ಸೆಪ್ಟಂಬರ್,24,2020(www.justkannada.in):  ಕೊರೋನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿನ್ನೆ ನಿಧನರಾಗಿದ್ದು ಇಂದು ಅವರ ಅಂತ್ಯಕ್ರಿಯೆ ಕೊರೋನಾ ನಿಯಮಾವಳಿಗಳ ಪ್ರಕಾರ ನವದೆಹಲಿಯಲ್ಲಿ ನಡೆಯಲಿದೆ.jk-logo-justkannada-logo

ಈ ನಡುವೆ ಸುರೇಶ್ ಅಂಗಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಸುರೇಶ್ ಅಂಗಡಿ ಅವರ ನಿಧನದಿಂದ ತುಂಬಾ ನೋವಾಗಿದೆ. ರೈಲ್ವೆ ರಾಜ್ಯ ಸಚಿವರಾಗಿ ಅವರು ಸಾಕಷ್ಟು ಕೊಡುಗೆಗಳನ್ನ ನೀಡಿದ್ದಾರೆ. ಅವರು ಪ್ರಮಾಣಿಕ ರಾಜಕಾರಣಿ ಜನಾನುರಾಗಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಬಿಎಸ್ ವೈ ಸಂತಾಪ ಸೂಚಿಸಿದ್ದಾರೆ.cm-bs-yeddyurappa-condoles-death-union-minister-suresh-angadi

Key words: CM BS Yeddyurappa- condoles – death -Union Minister -Suresh Angadi