ರಾಜಕೀಯ ಮೀಸಲಾತಿಯಿಂದ ಸಾಮಾಜಿಕ, ಆರ್ಥಿಕ ಸಮಾನತೆ ಸಾಧ್ಯವಾಗಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಸೆಪ್ಟೆಂಬರ್,24,2020(www.justkannada.in) : ಪೂನಾ ಒಪ್ಪಂದದಿಂದಾಗಿ ರಾಜಕೀಯದಲ್ಲಿ ದಲಿತ ರಾಜಕಾರಣದ ಶಕ್ತಿ ಹೆಚ್ಚಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಾಮಾಜಿಕ, ಆರ್ಥಿಕ ಸಮಾನತೆ ರಾಜಕೀಯ ಮೀಸಲಾತಿಯಿಂದ ಸಾಧ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-logoಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ”ಪೂನಾ ಒಪ್ಪಂದದ ದಿನ’’ ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಮೀಸಲಾತಿಯ ಇತಿಹಾಸವು 9 ದಶಕಗಳ ಸಮೀಪದಲ್ಲಿದೆ

ಇಂದು ಕಾಯ್ದಿರಿಸಿದ ಕ್ಷೇತ್ರಗಳಿಂದ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿಯಿಂದ 84 ಮಂದಿ ಮತ್ತು ಪರಿಶಿಷ್ಟ ಪಂಗಡದಿಂದ 47 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಪ್ರತಿ ರಾಜ್ಯದ ಶಾಸಕಾಂಗ ಸಭೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ಕಾಯ್ದಿರಿಸಲಾಗಿದೆ. ರಾಜಕೀಯ ಮೀಸಲಾತಿಯ ಇತಿಹಾಸವು 9 ದಶಕಗಳ ಸಮೀಪದಲ್ಲಿದೆ ಎಂದರು.

Social-economic-equality-made-possible-political-reservation-Chancellor-Prof G.Hemant Kumar

ಪೂನಾ ಒಪ್ಪಂದ ಸಂಬಂಧ ಅಂಬೇಡ್ಕರ್ ಅವರು ಅಸಮಾಧಾನ ಹೊಂದಿದ್ದರು. ಈ ಒಪ್ಪಂದವು ಅಸ್ಪೃಶ್ಯರನ್ನು ಹಿಂದೂಗಳ ನಿಯಂತ್ರಣದಲ್ಲಿಡುವುದು. ಅಸ್ಪೃಶ್ಯರು ರಾಜಕೀಯದಲ್ಲಿ ಬದುಕುಳಿಯಲು ಯಾವಾಗಲೂ ಸ್ಪೃಶ್ಯರ ಕರುಣೆಯಡಿಯಲ್ಲಿ ಉಳಿಯುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು ಎಂಬ ಅಕ್ರೋಶವಿತ್ತು. ಕಳೆದ ಎರಡು ಸಾವಿರ ವರ್ಷಗಳಲ್ಲಿ ಕಣ್ಮರೆಯಾಗದ ಅಸ್ಪೃಶ್ಯತೆಯು 20 ವರ್ಷಗಳಲ್ಲಿ ಮಾಯವಾಗುತ್ತದೆಯೇ ಎಂದು ಅವರು ಅನುಮಾನಿಸಿದರು ಎಂದು ವಿವರಿಸಿದರು.

ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವಕುಲದ ಒಳಿತಿಗೆ ಶ್ರಮಿಸಿದ್ದಾರೆ

ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮಹಾತ್ಮಗಾಂಧಿ ಮತ್ತು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರಮುಖರಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ,ಸಮಾನತೆಯಂತ ಉತ್ತಮ ಮೌಲ್ಯಗಳನ್ನು ನೀಡಿದ್ದಾರೆ. ರಾಷ್ಟ್ರ ಮತ್ತು ಸಮಾಜದ ಬಗ್ಗೆ ತಮ್ಮದೇ ಆಲೋಚನೆ, ತಿಳುವಳಿಕೆಯಿಂದ ಮಾನವಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ ಎಂದರು.

ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದಿಂದ ಉತ್ತಮ ಕಾರ್ಯ 

ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರವು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಂಬೇಡ್ಕರ್ ಅವರ ಸಿದ್ಧಾಂತ, ಹೋರಾಟ ಮತ್ತು ಬರಹಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ರೂಪಿಸಿದವು ಎಂಬಿತ್ಯಾದಿಯಾಗಿ ಮಾಹಿತಿಯನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಬಳಿಕ ರಾಜಕೀಯ ಮೀಸಲಾತಿ ವಿಮರ್ಶಾತ್ಮಕ ಮೌಲ್ಯಮಾಪನ ವಿಷಯ ಕುರಿತು ಜೆಎನ್ ಯು ರಾಜಕೀಯ ಅಧ್ಯಯನ ಕೇಂದ್ರ ನಿವೃತ್ತ ಪ್ರಾಧ್ಯಾಪಕ ಡಾ.ಗೋಪಾಲ್ ಗುರು ಉಪನ್ಯಾಸ ನೀಡಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಡಿ.ಜೀವನ್ ಕುಮಾರ್ ವೆಬಿನಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ವಿಜ್ಞಾನ ಭವನ ಕಾರ್ಯಕ್ರಮ ಸಂಯೋಜನಾಧಿಕಾರಿ ಚಂದ್ರನಾಯಕ್ ಸೇರಿದಂತೆ ಅನೇಕರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

key words : Social-economic-equality-made-possible-political-reservation-Chancellor-Prof G.Hemant Kumar