Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Cinema ಲಾಕ್ ಡೌನ್ ವೇಳೆ ಎರಡು ಸಿನಿಮಾ ಕಥೆ ಬರೆದ ‘ಪೈಲ್ವಾನ್’ ಕೃಷ್ಣ

ಲಾಕ್ ಡೌನ್ ವೇಳೆ ಎರಡು ಸಿನಿಮಾ ಕಥೆ ಬರೆದ ‘ಪೈಲ್ವಾನ್’ ಕೃಷ್ಣ

ಬೆಂಗಳೂರು, ಸೆಪ್ಟೆಂಬರ್ 23, 2020 (www.justkannada.in):
ಲಾಕ್ ಡೌನ್ ಸಮಯದಲ್ಲಿ ನಿರ್ದೇಶಕ ಎಸ್ ಕೃಷ್ಣ ಎರಡು ಕಥೆಗಳನ್ನು ಬರೆದಿದ್ದಾರೆ.

ಎರಡೂ ಚಿತ್ರಗಳು ನನ್ನ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ನಡಿ ತಯಾರಾಗಲಿದೆ. ಒಂದು ಚಿತ್ರಕ್ಕೆ ನಾನು ನಿರ್ದೇಶನ ಮಾಡಿದರೆ ಮತ್ತೊಂದನ್ನು ಮತ್ತೊಬ್ಬ ನಿರ್ದೇಶಕರು ಮಾಡಲಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.

ಚಿತ್ರಕ್ಕಾಗಿ ಕನ್ನಡದ ಒಬ್ಬ ಟಾಪ್ ಹೀರೋ ಜೊತೆ ಮಾತುಕತೆ ನಡೆಸುತ್ತಿದ್ದೇನೆ, ಅವರು ಒಪ್ಪಿಗೆ ನೀಡಿ ಎಲ್ಲವೂ ಮುಕ್ತಾಯದ ಹಂತಕ್ಕೆ ಬಂದರೆ ಸದ್ಯದಲ್ಲಿಯೇ ಘೋಷಿಸುತ್ತೇನೆ ಎಂದಿದ್ದಾರೆ ಪೈಲ್ವಾನ್ ಡೈರೆಕ್ಟರ್.