Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Uncategorized ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು?

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು?

ಬೆಂಗಳೂರು,ಆಗಸ್ಟ್,31,2020(www.justkannada.in) ; ಡ್ರಗ್ಸ್ ಮಾಫಿಯಾ ಕೇವಲ ಸ್ಯಾಂಡಲ್ ವುಡ್ ಗೆ ಅಲ್ಲ ಕರ್ನಾಟಕಕ್ಕೆ ಬಂದ ಕಳಂಕ ಎಂದು ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

jk-logo-justkannada-logo

26 ವರ್ಷದಲ್ಲಿ ಎಂದು ಡ್ರಗ್ಸ್ ಜಾಲದ ಬಗ್ಗೆ ಕೇಳಿರಲಿಲ್ಲ. ಸತ್ತವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅವರ ಬಗ್ಗೆ ಒಳ್ಳೆಯದು ಮಾತಾಡೋಣ. ಒಂದು ಕ್ಲಾಸ್ ನಲ್ಲಿ ರ್ಯಾಂಕ್ ಸ್ಟೂಡೆಂಟ್ ಹಾಗೂ ಸೊನ್ನೆ ತೆಗೆದುಕೊಳ್ಳುವ ಸ್ಟೂಡೆಂಟ್ ಇರುತ್ತಾರೆ. ಹಾಗಾಗಿ, ಎಲ್ಲರನ್ನೂ ಒಂದೇ ಮಾಡಬಾರದು ಎಂದರು.

ಸತ್ತವರ ಬಗ್ಗೆ ಆರೋಪ ಮಾಡುವುದರಿಂದ ಅವರು ತಪ್ಪು ಮಾಡಿದರೂ ಕೂಡ ಶಿಕ್ಷೆ ವಿಧಿಸುವುದಕ್ಕೆ ಆಗಲ್ಲ.ಹಾಗಾಗಿ,ಅವರ ಬಗ್ಗೆ ಒಳ್ಳೆಯದು ಮಾತಾಡೋಣ ಎಂದು ಚಿರು ಸರ್ಜಾ ಮೇಲಿನ ಆರೋಪಕ್ಕೆ ಬೇಸರವ್ಯಕ್ತಪಡಿಸಿದರು.

key words ; Challenging-Star-Darshan-Sandalwood-Drugs-Mafia?