Tuesday, November 3, 2026

Dasara Wishes

Happy Dasara
Home Uncategorized MYSORE DASARA; ಈ ವರ್ಷದ ಚಿನ್ನದ ಅಂಬಾರಿಗೆ ಬಾಡಿಗೆ ಎಷ್ಟು ಗೊತ್ತಾ?

MYSORE DASARA; ಈ ವರ್ಷದ ಚಿನ್ನದ ಅಂಬಾರಿಗೆ ಬಾಡಿಗೆ ಎಷ್ಟು ಗೊತ್ತಾ?

ಈ ವರ್ಷದ ಚಿನ್ನದ ಅಂಬಾರಿಗೆ ಬಾಡಿಗೆ ಎಷ್ಟು ಗೊತ್ತಾ? : ಸಚಿವ ಡಾ.ಯತೀಂದ್ರ.

 

ಮೈಸೂರು, NOV.03,2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಚಿನ್ನದ ಅಂಬಾರಿಗೆ ಸರ್ಕಾರ ಎಷ್ಟು ಬಾಡಿಗೆ ನೀಡುತ್ತದೆ ಗೊತ್ತಾ?

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿವರು, ಚಿನ್ನದ ಅಂಬಾರಿಗೆ ಬಾಡಿಗೆ ನೀಡುವ ವಿಚಾರವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. 2000ನೇ ಇಸವಿಗೂ ಮುನ್ನ ಚಿನ್ನದ ಅಂಬಾರಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ, ಆನಂತರ ಅಂಬಾರಿ ಬಳಕೆಗೆ ಹಣ ಪಾವತಿಸುವ ಪದ್ಧತಿ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ₹50 ಲಕ್ಷ, ಈ ವರ್ಷ ಬರೋಬ್ಬರಿ ₹70 ಲಕ್ಷ ಬಾಡಿಗೆ ನೀಡಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ. ಜಂಬೂಸವಾರಿ ದಿನ ಮಧ್ಯಾಹ್ನದ ವೇಳೆಗೆ ಚಿನ್ನದ ಅಂಬಾರಿಯನ್ನು ಪಡೆಯಲಾಗುತ್ತದೆ. ಮೆರವಣಿಗೆ ಬನ್ನಿಮಂಟಪ ತಲುಪಿದ ಬಳಿಕ ಅದನ್ನು ಮರಳಿ ಅರಮನೆಗೆ ಹಸ್ತಾಂತರಿಸಲಾಗುತ್ತದೆ ಎಂದು ಸಂದರ್ಶನಕಾರರಿಗೆ ವಿವರಿಸಿದ್ದಾರೆ.

ಒಂದೇ ದಿನದ ಬಳಕೆಗೆ ₹70 ಲಕ್ಷವೇ?

ದಸರಾ ಜಂಬೂಸವಾರಿಯಲ್ಲಿ ಕೆಲವೇ ಗಂಟೆಗಳ ಕಾಲ ಬಳಕೆಯಾಗುವ ಚಿನ್ನದ ಅಂಬಾರಿಗೆ ಈ ವರ್ಷ ₹70 ಲಕ್ಷ ಪಾವತಿಸಿರುವುದಾಗಿ ಸಚಿವರು ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ₹20 ಲಕ್ಷ ಹೆಚ್ಚುವರಿ ಪಾವತಿಸಲಾಗಿದೆ.

ಅಂಬಾರಿಗೆ ಬಾಡಿಗೆ ನಿಗದಿಪಡಿಸುವ ಮಾನದಂಡವೇನು? ಈ ಹಣ ಯಾರಿಗೆ ಪಾವತಿಯಾಗುತ್ತದೆ? ವರ್ಷದಿಂದ ವರ್ಷಕ್ಕೆ ಬಾಡಿಗೆ ಹೆಚ್ಚಳಕ್ಕೆ ಕಾರಣವೇನು? ಸರ್ಕಾರ ಮತ್ತು ಅರಮನೆ ಆಡಳಿತ ಮಂಡಳಿ ನಡುವಿನ ಒಪ್ಪಂದವೇನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ.

ಮೈಸೂರು ದಸರಾ: ಎಲ್ಲಾ ಕಾರ್ಯಕ್ರಮವನ್ನೂ ಕಣ್ತುಂಬಿಕೊಳ್ಳಿ-ಸಿಎಂ ಡಿಕೆ ಶಿವಕುಮಾರ್

ಅರಮನೆ ಮತ್ತು ಚಿನ್ನದ ಅಂಬಾರಿಯ ಮಾಲೀಕತ್ವದ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಸರ್ಕಾರದ ನಡುವೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯತೀಂದ್ರ ಅವರ ಈ ಹೇಳಿಕೆ ದಸರಾ ಅಂಬಾರಿ ವಿವಾದಕ್ಕೆ ಮತ್ತಷ್ಟು ಮಹತ್ವ ನೀಡಿದೆ.

KEY WORDS:

Mysore Dasara 2026, Golden Howdah rent, Golden Ambari rental cost, Yathindra Siddaramaiah, Mysore Dasara Jamboo Savari, ₹70 lakh Golden Howdah, Mysore Palace, Karnataka Dasara news

ಈ ವರ್ಷದ ಚಿನ್ನದ ಅಂಬಾರಿಗೆ ಬಾಡಿಗೆ ಎಷ್ಟು ಗೊತ್ತಾ? : ಸಚಿವ ಡಾ.ಯತೀಂದ್ರ

English Summary
Title

Mysore Dasara 2026: Golden Howdah Rental Cost Rises to ₹70 Lakh, Reveals Minister Yathindra Siddaramaiah

Short Description
Mysuru: Do you know how much the Karnataka government pays to use the Golden Howdah during the world-famous Mysuru Dasara Jamboo Savari? Minister Dr. Yathindra Siddaramaiah has reiterated that the government pays rent for using the historic Golden Howdah. Speaking in an interview with a private news channel, he said the Howdah was provided free of cost until 2000, after which a rental system was introduced. While the government paid ₹50 lakh last year, the rental amount increased to ₹70 lakh this year. The Golden Howdah is collected on Jamboo Savari day and returned to Mysore Palace after the procession reaches Bannimantap.
Keywords
Mysore Dasara 2026, Golden Howdah rent, Golden Ambari rental cost, Yathindra Siddaramaiah, Mysore Dasara Jamboo Savari, ₹70 lakh Golden Howdah, Mysore Palace, Karnataka Dasara news