Sunday, September 13, 2026

BDA Apartments

Home Front Page ಬಾಕಿ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್ ಕಾರ್ಮಿಕರಿಂದ ಪ್ರತಿಭಟನೆ…

ಬಾಕಿ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್ ಕಾರ್ಮಿಕರಿಂದ ಪ್ರತಿಭಟನೆ…

ಮೈಸೂರು,ಆಗಸ್ಟ್,28,2020(www.justkannada.in):  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ  ಹಾಸ್ಟೆಲ್ ಕಾರ್ಮಿಕರು ಪ್ರತಿಭಟನೆ ನಡೆಸಿದರು.jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. various-demands-fulfillment-protest-hostel-workers-mysore

ಹಲವು ವರ್ಷಗಳಿಂದ ವಿವಿಹಾಸ್ಟೆಲ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವಜಾ ಮಾಡಿರುವ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಎರಡು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಿಗೆ ಸಂಬಳ, ಇಎಸ್ಐ, ಪಿಎಫ್ ನೀಡಿಲ್ಲ. ಕಾರ್ಮಿಕರಿಗಾಗಿರುವ ಅನ್ಯಾಯದ ಕುರಿತು ಯಾವುದೇ ಅಧಿಕಾರಿಗಳು ಕ್ರಮವಹಿಸಿಲ್ಲ. ಕೂಡಲೇ ಹಾಸ್ಟೆಲ್ ಕಾರ್ಮಿಕರಿಗೆ ಬಾಕಿ ವೇತನದ ಜೊತೆಗೆ ಇಎಸ್ಐ, ಪಿಎಫ್ ನೀಡಬೇಕು. ಹಾಲಿ ಕಾರ್ಮಿಕರನ್ನು ಸೇವೆಯಲ್ಲಿ ಮುಂದುವರೆಸುವಂತೆ ಪ್ರತಿಭಟನಾಕಾರರು  ಆಗ್ರಹಿಸಿದರು.

Key words: Various –demands-fulfillment- Protest – hostel workers – Mysore.