ಪೀರನವಾಡಿಯಲ್ಲಿ ಮರಾಠಿಗರ ಪುಂಡಾಟ ಖಂಡಿಸಿ ಕನ್ನಡ ಒಕ್ಕೂಟದಿಂದ ಪ್ರತಿಭಟನೆ

ಮೈಸೂರು, ಆಗಸ್ಟ್, 28, 2020(www.justkananda.in) ; ಬೆಳಗಾವಿಯ ಪೀರನವಾಡಿಯಲ್ಲಿ ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಮರಾಠಿಗರ ಪುಂಡಾಟವನ್ನು ಖಂಡಿಸಿ ಕನ್ನಡ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo

ನಗರದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಮರಾಠಿಗರ ಪುಂಡಾಟದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕನ್ನಡಿಗರ ಮೇಲೆ ನಿರಂತರವಾಗಿ ಎಂ.ಇ.ಎಸ್ ಪುಂಡರ ಪುಂಡಾಟಿಕೆ ಹೆಚ್ಚಾಗುತ್ತಿದ್ದು, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಸಂದರ್ಭದಲ್ಲಿ ಕೂಡ ಆಡಚಣೆ ಉಂಟು ಮಾಡಿದ್ದು, ಈಗಿನ ರಾಯಣ್ಣನ ಅಭಿಮಾನಿಗಳ ಮೇಲೆ ಮರಾಠಿಗರು ಚಪ್ಪಲಿ ಎಸೆದು ಹಲ್ಲೆ ಮಾಡುವುದಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಈ ದೌರ್ಜನ್ಯನ್ನು ಖಂಡಿಸಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದು, ಈ ದೌರ್ಜನ್ಯ ನಿಲ್ಲದಿದ್ದಲ್ಲಿ ನಾಳೆ ಎಲ್ಲಾ ಕನ್ನಡ ಪರ ಪ್ರಗತಿ ಪರ ಸಂಘಟನೆಗಳು ಸಭೆ ಸೇರಿ ಈ ಹೋರಾಟವನ್ನು ರಾಜ್ಯದಾದ್ಯಂತ ಹೋರಾಟ ನೆಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಈ ಸಂಧರ್ಭದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ , ಧನಪಾಲ್ ಕುರುಬರಹಳ್ಳಿ , ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಧ್ಯಕ್ಷ ಕೆ‌.ಎಸ್ ಶಿವರಾಮು, ಕರುಣಾಕರನ್ , ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ , ಡಾ ರಾಜ್ ಕನ್ನಡ ಕನ್ನಡ ಸೇನೆ ಅಧ್ಯಕ್ಷರಾದ ಮಹಾದೇವ ಸ್ವಾಮಿ  ಇತರರು ಭಾಗವಹಿಸಿದ್ದರು.

key words : Protests-condemning-Marathi-riots-Peranavadi