Monday, September 14, 2026

BDA Apartments

ದುಬೈ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು! BDA JK_Adv BDA Adv
Home Front Page ದುಬೈ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ದುಬೈ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಬೆಂಗಳೂರು, ಆಗಸ್ಟ್ 21, 2020 (www.justkannada.in): ಆರ್’ಸಿಬಿ ತಂಡ ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿದೆ.

ಆರ್’ಸಿಬಿ ತಂಡದ ಆಟಗಾರರು ಬೆಂಗಳೂರಿನಲ್ಲಿ 7 ದಿನ ಕ್ಯಾರೆಂಟೈನ್ ಆಗಿ, ಕೊವಿಂದ್ ತಪಾಸಣೆಗಳನ್ನು ಮುಗಿಸಿ ದುಬೈಗೆ ತೆರಳಿದ್ದಾರೆ. ದುಬೈನಲ್ಲೂ 7 ದಿನಗಳ ಕ್ಯಾರೆಂಟೈನ್ ಇರಲಿದ್ದು ಅಲ್ಲೂ ಕೋವಿದ್ ಪರೀಕ್ಷೆ ನಡೆಯಲಿದೆ. ಒಟ್ಟು 60 ಪಂದ್ಯಗಳ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ.

ಆಗಸ್ಟ್ 29ರಿಂದ ಪೂರ್ವ ಸಿದ್ಧತಾ ಶಿಬಿರ ನಡೆಯಲಿದೆ. 60 ಪಂದ್ಯಗಳನ್ನು ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ.