Sunday, August 23, 2026

BDA Apartments

Home Front Page ಕೂಲ್ ಕ್ಯಾಪ್ಟನ್’ಗೆ ಸೆಂಡಾಫ್ ಮ್ಯಾಚ್ ಆಯೋಜನೆಗೆ ಪ್ಲಾನ್ !

ಕೂಲ್ ಕ್ಯಾಪ್ಟನ್’ಗೆ ಸೆಂಡಾಫ್ ಮ್ಯಾಚ್ ಆಯೋಜನೆಗೆ ಪ್ಲಾನ್ !

ಬೆಂಗಳೂರು, ಆಗಸ್ಟ್ 20, 2020 (www.justkannada.in): ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಉತ್ಸುಕವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಐಪಿಎಲ್ ವೇಳೆ ಧೋನಿ ಜೊತೆ ಬೀಳ್ಕೊಡುಗೆ ಪಂದ್ಯದ ಬಗ್ಗೆ ಮಾತನಾಡಲಾಗುವುದು ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ಇಲ್ಲ. ಐಪಿಎಲ್ ನಂತರ ಏನು ಮಾಡಬೇಕು? ನಿವೃತ್ತಿ ಪಂದ್ಯವನ್ನು ಯಾವ ದೇಶ ಹಾಗೂ ಯಾವ ತಂಡದ ವಿರುದ್ಧ ಆಯೋಜಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ.