ಪೌರ ಕಾರ್ಮಿಕರೊಂದಿಗೆ ಸಂವಾದ: ಮೈಸೂರು ಪಾಲಿಕೆಯ ಪ್ರತಿನಿಧಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ..

ಮೈಸೂರು,ಆ,20,2020(www.justkannada.in):  ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು  ಈ ನಡುವೆ ದೇಶದ ಪೌರ ಕಾರ್ಮಿಕರ ಜತೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಸಂವಾದ ನಡೆಸಿ ಮಾತನಾಡಿದರು.jk-logo-justkannada-logo

ಇಂದು ಸ್ವಚ್ಚ ಸರ್ವೇಕ್ಷಣೆ ಪ್ರಶಸ್ತಿ ಪ್ರಧಾನ ವರ್ಚ್ಯುಯಲ್ ಕಾರ್ಯಕ್ರಮವನ್ನ ಮೈಸೂರಿನ ಅರಮನೆಯಂಗಳದಲ್ಲಿ ಆಯೋಜಿಸಲಾಗಿತ್ತು.   ವರ್ಚುವಲ್ ಲೈವ್ ಮೂಲಕ ದೇಶದ ಪೌರ ಕಾರ್ಮಿಕರ ಜತೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಗೈರಾಗಿದ್ದರು. ಮೈಸೂರು ಮಹಾನಗರ ಪಾಲಿಕೆ ಪ್ರತಿನಿಧಿಗಳಾಗಿ ಪೌರ ಕಾರ್ಮಿಕರಾದ ಮಂಜುಳ, ನಂಜುಂಡಸ್ವಾಮಿ ಭಾಗಿಯಾಗಿದ್ದರು.

ಕೊರೋನಾದಿಂದ ಗುಣಮುಖರಾಗಿದ್ದ ಮೈಸೂರು ಪಾಲಿಕೆ ಪ್ರತಿನಿಧಿ ನಂಜುಂಡಸ್ವಾಮಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ಸಚಿವರ ತಂಡ…

ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಮಂಜುಳ, ನಂಜುಂಡಸ್ವಾಮಿ  ಅವರನ್ನ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿಸಿದರು. ಈ ವೇಳೆ ಪೌರ ಕಾರ್ಮಿಕ ಮಹಿಳೆ ಮಂಜುಳರಿಗೆ ನೀವು ಎಷ್ಟು ವರ್ಷದಿಂದ ಇದ್ದೀರಾ…? ಎಂದು ಪ್ರಶ್ನಿಸಿದರು. ಪ್ರಶ್ನೆಗೆ ಉತ್ತರಿಸಿದ ಪೌರ ಕಾರ್ಮಿಕ ಮಹಿಳೆ ಮಂಜುಳಾ ಅವರು, ನಾನು 22 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಸಮುದಾಯಕ್ಕೆ ಟಾಯ್ಲೇಟ್ ಮಾಡಿ ಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಇನ್ನು ಕೊರೊನಾ ಪಾಸಿಟಿವ್ ಆಗಿ ಗುಣಮುಖರಾಗಿರುವ ಪೌರ ಕಾರ್ಮಿಕ ನಂಜುಂಡ ಸ್ವಾಮಿ ಅವರನ್ನ ಕೇಂದ್ರ ಸಚಿವರು ಮಾತನಾಡಿಸಿದರು. ಈ ವೇಳೆ ತಾನು ಕೊರೋನಾದಿಂದ  ಗುಣಮುಖರಾಗಿ ಮತ್ತೆ ಬಂದು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.Virtual program- Clean Survey Award-mysore- Civil Workers- central minister-Hardeep Singh Puri

ಈ ಮಾಹಿತಿಯಿಂದ ಪುಲ್ ಖುಷಿಯಾದ ಕೇಂದ್ರ ಸಚಿವರು ಚಪ್ಪಾಳೆ ತಟ್ಟಿ ನಂಜುಂಡಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಾಗೆಯೇ ಇದೇ ವೇಳೆ ಪ್ರಧಾನಿ ಮೋದಿಯವರ ವಿಮೆ ಯೋಜನೆ ಬಗ್ಗೆ ಪ್ರಸ್ತಾಪಿಸಿ ಇದರಿಂದ ಧೈರ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನಂಜುಂಡಸ್ವಾಮಿ ಕೇಂದ್ರ ಸಚಿವರಿಗೆ ಹೇಳಿದರು. ಜತೆಗೆ ಮಹಾನಗರ ಪಾಲಿಕೆ ಯೋಜನೆಗಳ ಬಗ್ಗೆಯೂ ನಂಜುಂಡಸ್ವಾಮಿ ಹಾಗೂ ಮಂಜುಳಾ ಅವರು ಸಂತಸ ವ್ಯಕ್ತ ಪಡಿಸಿದರು.   ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನೀಂ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಇನ್ನಿತರರು ಭಾಗಿಯಾಗಿದ್ದರು.

Key words: Virtual program- Clean Survey Award-mysore- Civil Workers- central minister-Hardeep Singh Puri