Saturday, August 8, 2026

BDA Apartments

Home Front Page ಆತ್ಮ ನಿರ್ಬರ ಕಲ್ಪನೆಯಂತೆ ನಮ್ಮ ರಾಷ್ಟ್ರದ ಸುಶಿಕ್ಷಿತರು ನಮ್ಮ ದೇಶದಲ್ಲೇ ಸೇವೆ ಮಾಡುವಂತೆ ಪ್ರೇರೇಪಿಸಬೇಕು- ಮೈಸೂರು...

ಆತ್ಮ ನಿರ್ಬರ ಕಲ್ಪನೆಯಂತೆ ನಮ್ಮ ರಾಷ್ಟ್ರದ ಸುಶಿಕ್ಷಿತರು ನಮ್ಮ ದೇಶದಲ್ಲೇ ಸೇವೆ ಮಾಡುವಂತೆ ಪ್ರೇರೇಪಿಸಬೇಕು- ಮೈಸೂರು ವಿವಿ ಕುಲಪತಿ. ಪ್ರೊ. ಜೆ. ಹೇಮಂತ್ ಕುಮಾರ್,

ಮೈಸೂರು,ಆ,15,2020(www.justkannada.in): ಪ್ರಧಾನಿ ಮೋದಿ ಅವರ ಆತ್ಮನಿರ್ಬರ ಕಲ್ಪನೆಯಂತೆ ಭಾರತದಲ್ಲಿ ಶಿಕ್ಷಣ ಪಡೆದ ನಮ್ಮ ಯುವಕ ಯುವತಿಯರು ತಮ್ಮ ಜ್ಞಾನವನ್ನ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಧಾರೆ ಎರೆಯುವಂತೆ ಅವರನ್ನ ಪ್ರೇರೇಪಿಸಬೇಕಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜೆ. ಹೇಮಂತ್ ಕುಮಾರ್ ನುಡಿದರು.inspire –our- nation - serve - our country-voice Chancellor -Mysore university-Pro. J. Hemanth Kumar.

74 ನೇ ಸ್ವಾತಂತ್ರ್ಯೋತ್ಸವ ಹಿನ್ನಲೆ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ವಿವಿ ಕುಲಪತಿ ಪ್ರೊ. ಜೆ. ಹೇಮಂತ್ ಕುಮಾರ್ ಧ್ವಜಾರೋಹಣ ನೇರವೇರಿಸಿ ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.inspire –our- nation - serve - our country-voice Chancellor -Mysore university-Pro. J. Hemanth Kumar.

ಬಳಿಕ ಮಾತನಾಡಿದ ಅವರು,  ಯುವಜನತೆಯು ಭಾರತ ದೇಶದ ಜನಸಂಖ್ಯೆಯ ಪ್ರಧಾನ ಅಂಶವಾಗಿರುವುದರಿಂದ ಅವರ ವಿದ್ಯೆ ಮತ್ತು ಉದ್ಯೋಗ ನಮ್ಮ ಗಮನಕ್ಕೆ ಬರಬೇಕಾಗಿದೆ. ಆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕೇಂದ್ರಗಳಾದಂತಹ ವಿಶ್ವವಿದ್ಯಾನಿಲಯಗಳ ಪಾತ್ರ ದೊಡ್ಡದು. ಹೀಗಾಗಿ ಮೈಸೂರು ವಿವಿ ಉನ್ನತ ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ. ಶಿಕ್ಷಣಕ್ಕೂ ಮತ್ತು ಸ್ವಾತಂತ್ರಕ್ಕೂ ಅವಿನಾಭಾವ ಸಂಬಂಧವಿದೆ. ಒಂದು ರಾಷ್ಟ್ರದ ಸ್ವತಂತ್ರ ಸುರಕ್ಷಿತವಾಗಿರಬೇಕಾದರೇ  ಸುಶಿಕ್ಷಿತರು ಜಾಗೃತರಾಗಿರಬೇಕು. ಮಾನ್ಯ ಪ್ರಧಾನಿಗಳು ಮೇಲಿಂದ ಮೇಲೆ ನೆನಪಿಸುವ ಹಾಗೆ ನಾವು ಉದ್ಯೋಗವನ್ನ ಬೇಡುವವರನ್ನ ಸೃಷ್ಠಿಸುವುದಕ್ಕಿಂತ ಉದ್ಯೋಗವನ್ನ ನೀಡುವವರನ್ನ ಸೃಷ್ಠಿಸಬೇಕು ಎಂದು ಹೇಳಿದರು.

ಹಾಗೆಯೇ ಕರೋನಾ ವೈರಸ್  ಹಾವಳಿಯ ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನೆಲೆಸಿದ್ದ  ಭಾರತದ ಹಲವು ಸುಶಿಕ್ಷಿತರು ಮರಳಿ ಮನೆಗೆ ಬರುವಂತಾಯಿತು. ಭಾರತದಲ್ಲಿ ಶಿಕ್ಷಣ ಪಡೆದ ನಮ್ಮ  ಯುವಕ ಯುವತಿಯರು ತಮ್ಮ ಜ್ಞಾನವನ್ನ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಧಾರೆ ಎರೆಯುವಂತೆ ಅವರನ್ನ ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಮಾನ್ಯ ಪ್ರಧಾನಿಮಂತ್ರಿಗಳ ಆತ್ಮನಿರ್ಭರ ಭಾರತ ಕಲ್ಪನೆಯೂ ಆದೇ ಆಗಿದೆ. ನಮ್ಮ ಅಗತ್ಯವಾದ ವಸ್ತುಗಳನ್ನ ನಾವೇ ಸೃಷ್ಠಿಸಿಕೊಳ್ಳುವುದು ಮಾತ್ರವಲ್ಲ. ನಮ್ಮ ಬುದ್ದಿವಂತ ಪ್ರತಿಭಾವಂತ ಸುಶಿಕ್ಷಿತರನ್ನ ಇಲ್ಲೇ ಇರಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಅವರು ಸೇವೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ ಎಂದು ಹೇಮಂತ್ ಕುಮಾರ್ ಕರೆ ನೀಡಿದರು.

Key words: inspire –our- nation – serve – our country-voice Chancellor -Mysore university-Pro. J. Hemanth Kumar.