Saturday, August 15, 2026

BDA Apartments

Home Crime ಪತಿಯ ಸಹಚರನ ಜತೆ ಅಕ್ರಮ ಸಂಬಂಧ: ರೌಡಿಶೀಟರ್ ಹತ್ಯೆಗೈದ ಪತ್ನಿ, ಮೂವರ ಬಂಧನ

ಪತಿಯ ಸಹಚರನ ಜತೆ ಅಕ್ರಮ ಸಂಬಂಧ: ರೌಡಿಶೀಟರ್ ಹತ್ಯೆಗೈದ ಪತ್ನಿ, ಮೂವರ ಬಂಧನ

ಬೆಂಗಳೂರು:ಜೂ-6:(www.justkannada.in) ರೌಡಿ ಶೀಟರ್‌ ಸ್ಟೀಫನ್‌ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಸ್ಟೀಫನ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಪತಿಯ ಸಹಚರನ ಜತೆಯೇ ಅನೈತಿಕ ಸಂಬಂಧ ಕೊಲೆಗೆ ಕಾರಣ ಎಂಬುದು ತಿಳಿದುವ್ಬಂದಿದೆ.

ಚೆನ್ನೈ ಮೂಲದ ಲಿಂಗರಾಜಪುರಂ ನಿವಾಸಿ ಸ್ಟೀವನ್‌ ರಾಜಾ ಕೊಲೆಯಾಗಿರುವ ರೌಡಿ ಶೀಟರ್‌. ಪತಿಯ ಸಹಚರನ ಜತೆ ಅನೈತಿಕ ಸಂಬಂಧ ಹೊಂದಿದ್ದ ಸ್ಟೀವನ್ ಪತ್ನಿ ರಜನಿ ಹಾಕಿದ ಸ್ಕೆಚ್‌ನಂತೆ ಕೊಲೆ ನಡೆದಿದೆ ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕೆ ಜಿ ಹಳ್ಳಿ ಪೊಲೀಸರು, ರಜನಿ, ವಿನೋಬಾನಗರದ ಕಿರಣ್‌ ಕುಮಾರ್‌ (25), ಮಹೇಂದ್ರನ್‌ (27) ಎಂಬ ಮೂವರನ್ನೂ ಬಂಧಿಸಿದ್ದಾರೆ.

ಸ್ಟೀಫನ್‌ ಇತ್ತೀಚಿಗಷ್ಟೇ ರೌಡಿ ವೃತ್ತಿಯನ್ನು ಬಿಟ್ಟು ಚೆನ್ನೈನಲ್ಲಿ ಪತ್ನಿ ರಜನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದ. ಆದರೂ ಆಗಾಗ ಬೆಂಗಳೂರಿಗೆ ಬಂದು ಸ್ನೇಹಿತರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದ. ಸ್ಟೀಫನ್‌ ಬೆಂಗಳೂರಿಗೆ ಬಂದಾಗಲೆಲ್ಲಾ ಈತನ ದೂರದ ಸಂಬಂಧಿ ಹಾಗೂ ಸಹಚರ ಸ್ಟ್ಯಾನ್ಲಿ ಚೆನ್ನೈಗೆ ಹೋಗುತ್ತಿದ್ದ. ಈತನಿಗೂ ಸ್ಟೀಫನ್‌ ಪತ್ನಿಗೂ ಅನೈತಿಕ ಸಂಬಂಧ ಇತ್ತು. ಇದು ಸ್ಟೀಫನ್‌ಗೆ ಗೊತ್ತಾಗಿ ಇಬ್ಬರಿಗೂ ಬುದ್ಧಿ ಹೇಳಿದ್ದ. ಆದರೂ ಪತ್ನಿ, ಸ್ಟ್ಯಾನ್ಲಿ ಯನ್ನು ಬಿಡಲು ತಯಾರಿರಲಿಲ್ಲ. ಇದೇ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡುವ ಸಂಚು ರೂಪಿಸಿದ್ದಳು. ಸ್ಟೀಫನ್ ಹಿದಾಯತ್ ನಗರದ ತನ್ನ ಮಾವನ ಮನೆಗೆ ಬಂದಿದ್ದ ವೇಳೆ ಕಿರಣ್ ಹಾಗೂ ಮಹೇಂದ್ರನ್ ರಜನಿ ಮಾತಿನಂತೆ ಸ್ಟೀಫನ್ ಹತ್ಯೆ ಮಾಡಿದ್ದರು.

ಬಳಿಕ ತಮಿಳುನಾಡಿಗೆ ಪರಾರಿಯಾಗಲು ಮುಂದಾಗಿದ್ದ ಕಿರಣ್‌ ಹಾಗೂ ಮಹೇಂದ್ರನನ್ನು ಕೆ.ಆರ್‌ಪುರ ರೈಲ್ವೆ ನಿಲ್ದಾಣದಲ್ಲಿ ಪೊಲಿಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಸ್ಟೀಫನ್‌ ಪತ್ನಿ ರಜನಿಯೇ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಪತಿಯ ಸಹಚರನ ಜತೆ ಅಕ್ರಮ ಸಂಬಂಧ: ರೌಡಿಶೀಟರ್ ಸ್ಟೀಫನ್‌ ಹತ್ಯೆಗೈದ ಪತ್ನಿ; ಮೂವರ ಬಂಧನ
Bangalore,rowdy sheeter murder case,wife arrested