Thursday, August 6, 2026

BDA Apartments

Home Front Page ನಮ್ಮವರೇ ಅನಗತ್ಯ ಗೊಂದಲ ಸೃಷ್ಠಿ ಮಾಡಬೇಡಿ-  ತಮ್ಮ ಪಕ್ಷದ ಮುಖಂಡರಿಗೆ ಚಾಟಿ ಬೀಸಿದ ಸಚಿವ ವಿ.ಸೋಮಣ್ಣ..

ನಮ್ಮವರೇ ಅನಗತ್ಯ ಗೊಂದಲ ಸೃಷ್ಠಿ ಮಾಡಬೇಡಿ-  ತಮ್ಮ ಪಕ್ಷದ ಮುಖಂಡರಿಗೆ ಚಾಟಿ ಬೀಸಿದ ಸಚಿವ ವಿ.ಸೋಮಣ್ಣ..

ಬೆಂಗಳೂರು,ಜು,30,2020(www.justkannada.in): ಬಿ.ಎಸ್ ಯಡಿಯೂರಪ್ಪ ಒಂದು ವರ್ಷ ಪೂರೈಸಿದ ವೇಳೆ ಒಡಕು ಧ್ವನಿ  ಬರುತ್ತಿದೆ.  ಆದ್ರೆ ಸಿ.ಎಂ ಬಿಎಸ್ ವೈ ಪ್ರಶ್ನಾತೀತ ನಾಯಕರು. ಹೀಗಾಗಿ ನಮ್ಮವರೇ ಅನಗತ್ಯ ಗೊಂದಲ ಸೃಷ್ಠಿ ಮಾಡಬೇಡಿ ಎಂದು ವಸತಿ ಸಚಿವ ವಿ.ಸೋಮಣ್ಣ ತಮ್ಮ ಪಕ್ಷದ ಮುಖಂಡರಿಗೆ ಚಾಟಿ ಬೀಸಿದರು.jk-logo-justkannada-logo

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಹೊರಗಿನಿಂದ ಬಂದವರಿಗೆ ನಮ್ಮಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಎಂದು ಜೆಡಿಎಸ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಶಾಸಕರಿಗೆ ಟಾಂಗ್ ನೀಡಿದರು.

ಹಾಗೆಯೇ ಸರ್ಕಾರ ಬಂದಾಗ ನಾವು 105 ಮಂದಿಯಷ್ಟೇ ಇದ್ದವು. ಬಿಎಸ್ ವೈ ಸಿಎಂ ಆಗಿ 1 ವರ್ಷ ಪೂರೈಸಿದ ವೇಳೆ ಒಡಕು ಧ್ವನಿ ಬರುತ್ತಿದೆ. ಆದರೇ ಸಿಎಂ ಬಿಎಸ್ ಯಡಿಯೂರಪ್ಪ ಪ್ರಶ್ನಾತೀತ ನಾಯಕರು.  ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನ ಎದುರಿಸುತ್ತೇವೆ. ನಮ್ಮವರೇ ಅನಗತ್ಯ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಹೇಳಿದರು.do-not-create-unnecessary-confusion-ourselves-minister-v-somanna-party-leaders

Key words: Do not- create- unnecessary -confusion –ourselves-Minister- V. Somanna – party leaders.