ಕಳೆದ 15 ದಿನದ ಹಿಂದೆ ಬಂದು ಕಾಂಗ್ರೆಸ್ ಗೆ ಸೇರಿಸ್ಕೊಳ್ಳಿ ಅಂತಾ ಕಾಲು ಹಿಡಿದಿದ್ದ- ಸಿಪಿ ಯೋಗಶ್ವರ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ ಶಿವಕುಮಾರ್..

ಬೆಂಗಳೂರು,ಜು,30,2020(www.justkannada.in): ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ಹೆಚ್.ಡಿಕೆಗೆ ಡಿಕೆ ಬ್ರದರ್ಸ್  ತೊಂದರೆ ಕೊಡುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಬಗ್ಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.jk-logo-justkannada-logo

ಸಿ.ಪಿ ಯೋಗೇಹೇಶ್ವರ್ ಕಳೆದ 15 ದಿನಗಳ ಹಿಂದೆ ಬಂದು ನನ್ನ ಕಾಲಿಗೆ ಬಿದ್ದಿದ್ದ. ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪರನ್ನ ಕೆಳಗೆ ಇಳಿಸುತ್ತಾರೆ. ನನ್ನನ್ನ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕೇಳಿದ್ದನಾನೇ ಹೋಗ್ಲಿ ಪಾಪ ಅಂತ ‘ ನೀನು ಬಿಜೆಪಿಯಲ್ಲೇ ಇರು. ನಿನ್​ ಪಾರ್ಟಿಗೆ ಲಾಯಲ್​ ಆಗಿರು’ ಎಂದು ಬುದ್ದಿ ಹೇಳಿ ಕಳಿಸಿದ್ದೆ ಎಂದು ಸಿ.ಪಿ.ಯೋಗೇಶ್ವರ್​ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​  ವಾಗ್ದಾಳಿ ನಡೆಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್,  15 ದಿನದ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಯೋಗೇಶ್ವರ್​, ಯಡಿಯೂರಪ್ಪ ನನ್ನನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್​ಗೆ ಬರುವೆ ಎಂದು ಹೇಳಿದ್ದ.  ಈಗ ಯಾಕೆ ಹೀಗೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಯೋಗೇಶ್ವರ್ ಏನು ಮೆಂಟಲಾ..? ಎಂದು ಕಿಡಿಕಾರಿದರು.kpcc-president-dk-shivakumar-bjp-mlc-cp-yogeshwar

ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್​ಗೆ ನಾಮನಿರ್ದೇಶನ ಆಗುತ್ತಿದ್ದಂತೆ ಡಿಕೆಶಿ ಮತ್ತು ಎಚ್​ಡಿಕೆ ವಿರುದ್ಧ ವಾಕ್ಸಮರ ನಡೆಸಿದ್ದರು. ಡಿಕೆಶಿ ಮತ್ತು ಎಚ್​ಡಿಕೆ ಇಬ್ಬರೂ ನಿವೃತ್ತ ಕುದುರೆಗಳು ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್​ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು​ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದ್ದರು.

Key words: kpcc- president- DK shivakumar-BJP- MLC-cp yogeshwar