Friday, September 11, 2026

BDA Apartments

Home Front Page ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ: ಮಂಡ್ಯದಲ್ಲಿ ಸಚಿವ ನಾರಾಯಣ್ ಗೌಡರಿಂದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ….

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ: ಮಂಡ್ಯದಲ್ಲಿ ಸಚಿವ ನಾರಾಯಣ್ ಗೌಡರಿಂದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ….

ಮಂಡ್ಯ,ಜು,27,2020(www.justkannada.in):  ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷದ ಸಂಭ್ರಮವಾಗಿದ್ದು ಈ ಹಿನ್ನೆಲೆ ಒಂದು ವರ್ಷದ ಸರ್ಕಾರದ ಸಾಧನೆಯ ಪುಟಕ್ಕಿಟ್ಟ ಚಿನ್ನ ಕಿರುಹೊತ್ತಿಗೆಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದರು.jk-logo-justkannada-logo

ಈ ನಡುವೆ ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭವನದಲ್ಲಿ  ಸರ್ಕಾರದ ಒಂದು ವರ್ಷದ ಸಾಧನೆ ಸಮಾರಂಭ ನೇರ ಪ್ರಸಾರ ಕಾರ್ಯಕ್ರಮದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ನಾರಾಯಣ ಗೌಡ  ಭಾಗಿಯಾಗಿ ಸರ್ಕಾರದ ಒಂದು ವರ್ಷದ  ಸಾಧನೆಯ ಪುಸ್ತಕವನ್ನ ಬಿಡುಗಡೆ ಮಾಡಿದರು.  ‘ಸವಾಲಿನ ವರ್ಷ’ ‘ಪರಿಹಾರದ ಸ್ಪರ್ಶ’ ‘ರಾಜ್ಯ ಸಕಾರದ ಸಾಧನೆ ಪುಸ್ತಕ ಜನಪದ ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳ ಬಿಡುಗಡೆ ಮಾಡಿದರು.one-year-celebration-bsy-government-release-achievement-book-minister-narayan-gowda-mandya

ಜಿಲ್ಲಾಧಿಕಾರಿ  ಡಾ ನಾರಾಯಣಗೌಡ ಜಿ.ಪಂ.ಸಿಇಓ ಜುಲ್ಫಿಕರ್ ಅಹಮ್ಮದ್ ಉಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಅಪರ ಜಿಲ್ಲಾಧಿಕಾರಿ ಶೈಲಜಾ ಹಾಗೂ ಆಯ್ದ ಫಲಾನುಭವಿಗಳು, ಜಿಲ್ಲಾ ಮಟ್ಟದ  ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Key words: One Year- Celebration – BSY –Government-Release – achievement book- Minister Narayan Gowda -Mandya.