Wednesday, August 19, 2026

BDA Apartments

Home Front Page ರಾಜ್ಯದಲ್ಲಿ 75833ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ: ಮೈಸೂರಿನಲ್ಲೂ 145 ಕೋವಿಡ್ ಪ್ರಕರಣ ದೃಢ

ರಾಜ್ಯದಲ್ಲಿ 75833ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ: ಮೈಸೂರಿನಲ್ಲೂ 145 ಕೋವಿಡ್ ಪ್ರಕರಣ ದೃಢ

ಮೈಸೂರು, ಜುಲೈ 22, 2020 (www.justkannada.in): ಮೈಸೂರಿನಲ್ಲಿ ಕೊರೊನಾಗೆ 5 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಮೂಲಕ ಮೈಸೂರಿನಲ್ಲಿ 85ಕ್ಕೆ ಸೋಂಕಿತರ ಸಾವಿನ‌ ಸಂಖ್ಯೆ ಏರಿದೆ. ಮೈಸೂರಿನಲ್ಲಿಂದು 145 ಪಾಸಿಟಿವ್ ಪತ್ತೆಯಾಗಿದೆ. ಇದರೊಂದಿಗೆ ಮೈಸೂರಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2053 ಕ್ಕೇರಿಕೆ.

ಇಂದು 19 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಇದುವರೆಗೂ 693 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1275 ಕ್ಕೇರಿಕೆಯಾಗಿದೆ. ಉಳಿದೆಲ್ಲಾ ಸೋಂಕಿತರಿಗೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

4764 ಹೊಸ ಕೇಸ್ ಪತ್ತೆ

ರಾಜ್ಯದಲ್ಲಿ ಇಂದು 4764 ಹೊಸ ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿಯೇ ಬರೋಬ್ಬರಿ 2050 ಕೇಸ್ ಪತ್ತೆಯಾಗಿವೆ. ಕೊರೊನಾಗಿಂದು 55 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 75833 ಕ್ಕೇ ಏರಿಕೆಯಾಗಿದೆ.