Thursday, October 15, 2026

Dasara Wishes

Happy Dasara
Home Front Page ವಿಶ್ವಕಪ್ ಕ್ರಿಕೆಟ್: ಇಂದು ಶ್ರೀಲಂಕಾ-ಅಫ್ಘಾನಿಸ್ತಾನ ಸೆಣೆಸಾಟ

ವಿಶ್ವಕಪ್ ಕ್ರಿಕೆಟ್: ಇಂದು ಶ್ರೀಲಂಕಾ-ಅಫ್ಘಾನಿಸ್ತಾನ ಸೆಣೆಸಾಟ

ಕಾರ್ಡಿಫ್, ಜೂನ್ 4, 2019 (www.justkannada.in): ನ್ಯೂಝಿಲ್ಯಾಂಡ್ ವಿರುದ್ಧ ತಾನಾಡಿದ ಮೊದಲ ವಿಶ್ವಕಪ್ ಪಂದ್ಯದ ಎಲ್ಲ ವಿಭಾಗಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಶ್ರೀಲಂಕಾ ತಂಡ ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮಂಗಳವಾರ 2ನೇ ಲೀಗ್ ಪಂದ್ಯವನ್ನಾಡಲಿದ್ದು, ತಾವಾಡಿದ್ದ ಮೊದಲ ಪಂದ್ಯವನ್ನು ಸೋತಿವೆ.ನ್ಯೂಝಿಲ್ಯಾಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿರುವ ಶ್ರೀಲಂಕಾ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ.

ಇನ್ನು ಅಫ್ಘಾನಿಸ್ತಾನ ಬ್ರಿಸ್ಟೋಲ್‌ನಲ್ಲಿ ನಡೆದ ತಾನಾಡಿದ್ದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ದ 7 ವಿಕೆಟ್‌ಗಳಿಂದ ಸೋತಿದೆ.