ವಿಶ್ವಕಪ್ ಕ್ರಿಕೆಟ್: ಗೆದ್ದು ವಿಶಿಷ್ಟ ದಾಖಲೆ ನಿರ್ಮಿಸಿದ ಪಾಕಿಸ್ತಾನ

ನಾಟಿಂಗ್‌ಹ್ಯಾಮ್, ಜೂನ್ 4, 2019 (www.justkannada.in):: ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವೈಯಕ್ತಿಕ ಶತಕದ ಕೊಡುಗೆಯ ಬೆಂಬಲವಿಲ್ಲದೆ ಗರಿಷ್ಠ ಮೊತ್ತ ಗಳಿಸಿದ ಸಾಧನೆ ಮಾಡಿತು.

ಇಂಗ್ಲೆಂಡ್‌ನಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 348 ರನ್ ಗಳಿಸಿತು. ಸ್ಟಾರ್ ದಾಂಡಿಗ ಮುಹಮ್ಮದ್ ಹಫೀಝ್(84 ರನ್, 62 ಎಸೆತ)ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಬಾಬರ್ ಆಝಂ(64) ಹಾಗೂ ಸರ್ಫರಾಝ್ ಅಹ್ಮದ್(55)ಅರ್ಧಶತಕದ ಕೊಡುಗೆ ನೀಡಿ ತಂಡದ ಮೊತ್ತ ಹಿಗ್ಗಿಸಿದರು.

ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ವೈಯಕ್ತಿಕ ಶತಕವಿಲ್ಲದೆಯೇ ಮೂರನೇ ಬಾರಿ 300ಕ್ಕೂ ಅಧಿಕ ರನ್ ಗಳಿಸಿತು. ಈ ಹಿಂದೆ 1983ರಲ್ಲಿ ಶ್ರೀಲಂಕಾ ವಿರುದ್ಧ 5ಕ್ಕೆ 338 ರನ್ ಹಾಗೂ 2015ರ ವಿಶ್ವಕಪ್‌ನಲ್ಲಿ ಯುಎಇ ವಿರುದ್ಧ 6ಕ್ಕೆ 339 ರನ್ ಗಳಿಸಿತು. ದ.ಆಫ್ರಿಕ 2015ರ ವಿಶ್ವಕಪ್‌ನಲ್ಲಿ ವೆಲ್ಲಿಂಗ್ಟನ್ ಮೈದಾನದಲ್ಲಿ 6 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತ್ತು.