Wednesday, August 5, 2026

BDA Apartments

Home Front Page ‘ಜಸ್ಟ್ ಕನ್ನಡ’ದ ಆ ಪೋಸ್ಟ್ ಗಳಿಸಿದೆ 82 ಲಕ್ಷ ವ್ಯೂಸ್ !

‘ಜಸ್ಟ್ ಕನ್ನಡ’ದ ಆ ಪೋಸ್ಟ್ ಗಳಿಸಿದೆ 82 ಲಕ್ಷ ವ್ಯೂಸ್ !

ಬೆಂಗಳೂರು, ಜುಲೈ 21, 2020 (www.justkannada.in): ಎರಡು ವರ್ಷಗಳ ಹಿಂದೆ ಇದೇ ದಿನ (ಜುಲೈ 21) ಜಸ್ಟ್ ಕನ್ನಡದ ಪೋಸ್ಟ್’ವೊಂದು ಈವರೆಗೆ ಬರೋಬ್ಬರಿ 82 ಲಕ್ಷ ವೀಕ್ಷಕರನ್ನು ತಲುಪಿದೆ.

ಜಸ್ಟ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ 2018ರ ಜುಲೈ 21ರಂದು ಪೋಸ್ಟ್ ಮಾಡಿದ್ದ ವೀಡಿಯೋವೊಂದು 8.2 ಮಿಲಿಯನ್ ವೀಕ್ಷಕರಿಗೆ ತಲುಪಿದೆ.

ಮಾಜಿ ಸಚಿವರೊಬ್ಬರ ಮೈಸೂರಿನ ಮನೆ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಸ್ಥಳೀಯರು ಆಕೆ ರಕ್ಷಣೆಗೆ ಧಾವಿಸಿದ್ದರು. ಈ ವೇಳೆ ಆಕೆಯನ್ನು ವಿದ್ಯಾರಣ್ಯಪುರಂ ಪೋಲಿಸರು ವಶಕ್ಕೆ ಪಡೆದಿದ್ದರು. ಈ ವಿಡಿಯೋ ವರದಿಯನ್ನು ಜಸ್ಟ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿತ್ತು. ಆ ವೀಡಿಯೋವನ್ನು ನೆಟ್ಟಿಗರು ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ.

ಈ ವೀಡಿಯೋ ಪೋಸ್ಟ್’ಗೆ ಪರ ವಿರುದ್ಧವಾಗಿ ಒಟ್ಟು 978 ಕಾಮೆಂಟ್ಸ್, 22 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

Key words: just kannada-post reach-8.2m views