Friday, August 21, 2026

BDA Apartments

Home Front Page ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಆನ್’ಲೈನ್ ವಿಶೇಷ ಉಪನ್ಯಾಸ ಮಾಲಿಕೆ

ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಆನ್’ಲೈನ್ ವಿಶೇಷ ಉಪನ್ಯಾಸ ಮಾಲಿಕೆ

ಮೈಸೂರು, ಜುಲೈ 19, 2020 (www.justkannada.in): ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ವಿಶೇಷ ಉಪನ್ಯಾಸ ಮಾಲೆ ಶೀರ್ಷಿಕೆಯಡಿಯಲ್ಲಿ ಮೊದಲ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಮೊದಲ ವಿಶೇಷ ಉಪನ್ಯಾಸವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹಾಗೂ ಮಾಜಿ ಲೋಕಾಯುಕ್ತರಾದ ಗೌರವಾನ್ವಿತ ಸಂತೋಷ ಹೆಗಡೆಯವರು ಉದ್ಘಾಟಿಸಿದರು.

ಬಳಿಕ ,” ಸಾಮಾಜಿಕ ಮೌಲ್ಯಗಳ ಏಳುಬೀಳು ಹಾಗೂ ಪರಿಣಾಮಗಳು” ಎಂಬ ವಿಚಾರದ ಬಗ್ಗೆ ಕಾನೂನಿನ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಪ್ರಾಧ್ಯಾಪಕರು ಗಳಿಗೆ ಮೊದಲ ಆನ್ಲೈನ್ ಉಪನ್ಯಾಸವನ್ನು ನೀಡಿದರು.

ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಸುರೇಶ್ ವಿ ನಾಡಗೌಡರು ಹಾಗೂ ಎಲ್ಲಾ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.