Tuesday, October 13, 2026

Dasara Wishes

Happy Dasara
Home Front Page ಮೈಸೂರಿನಲ್ಲಿ ನಗರಪಾಲಿಕೆ ಸಿಬ್ಬಂದಿ, ಕೆಆರ್ ಆಸ್ಪತ್ರೆ ಸಿಬ್ಬಂದಿಗೂ ಅಂಟಿದ ಕೋವಿಡ್ 19

ಮೈಸೂರಿನಲ್ಲಿ ನಗರಪಾಲಿಕೆ ಸಿಬ್ಬಂದಿ, ಕೆಆರ್ ಆಸ್ಪತ್ರೆ ಸಿಬ್ಬಂದಿಗೂ ಅಂಟಿದ ಕೋವಿಡ್ 19

ಮೈಸೂರು, ಜುಲೈ 19, 2020 (www.justkannada.in): ಮೈಸೂರಿನಲ್ಲಿ ಮುಂದುವರೆದ ಕೊರೊನಾ ಆರ್ಭಟ. ಇಂದೂ ಸಹ 100 ಕ್ಕೂ ಹೆಚ್ಚು ಪಾಸಿಟಿವ್ ಸಾಧ್ಯತೆ ಇದೆ.

ಕೊರೊನಾ ವಾರಿಯರ್ಸ್‌‌ಗೆ ಮುಂದುವರಿದ ಕೊರೊ‌ನಾ ಕಂಟಕ. ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೆ ಆರ್ ಆಸ್ಪತ್ರೆ ವೈದ್ಯರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ವೈಧ್ಯಕೀಯ ವಿದ್ಯಾರ್ಥಿಗೂ ಸೋಂಕು ದೃಢಪಟ್ಟಿದೆ.

ಕೆಸರೆಯ ಮೂರು ವರ್ಷದ ಮಗುವಿಗೂ ಸೋಂಕು ದೃಢಪಟ್ಟಿದೆ. ಮೈಸೂರು ನಗರದ ಬನ್ನಿಮಂಟಪ ಉದಯಗಿರಿ ಕುವೆಂಪು ನಗರ ವಿಜಯನಗರ ಭಾಗಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದೆ.

ಗ್ರಾಮೀಣ ಭಾಗದಲ್ಲಿ ವೇಗವಾಗಿ ಹರಡುತ್ತಿರುವ ಸೋಂಕು, ತಿ. ನರಸೀಪುರ ಕೆ ಅರ್ ನಗರ, ಪಿರಿಯಾಪಟ್ಟಣ ಭಾಗದ ಹಳ್ಳಿಗಳಲ್ಲಿ ಹೆಚ್ಚಿದ ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.