Tuesday, September 15, 2026

BDA Apartments

ಬರಿಗೈನಲ್ಲಿ ಬೆಟ್ಟ ಹತ್ತಿದ ಐಂದ್ರಿತಾ ! BDA JK_Adv BDA Adv
Home Cinema ಬರಿಗೈನಲ್ಲಿ ಬೆಟ್ಟ ಹತ್ತಿದ ಐಂದ್ರಿತಾ !

ಬರಿಗೈನಲ್ಲಿ ಬೆಟ್ಟ ಹತ್ತಿದ ಐಂದ್ರಿತಾ !

ಬೆಂಗಳೂರು, ಜುಲೈ 07, 2020 (www.justkannada.in): ನಟಿ ಐಂದ್ರಿತಾ ರೇ ಇದೀಗ ಬರಿಗೈನಲ್ಲಿ ಬೆಟ್ಟ ಹತ್ತಿ ಸುದ್ದಿ ಮಾಡಿದ್ದಾರೆ.

ಜಾಲಿ ಮೂಡ್‍ ನಲ್ಲಿರುವ ಐಂದ್ರಿತಾ ರೇ, ಬೆಟ್ಟ ಗುಡ್ಡಗಳ ಅಲೆದಾಟದಲ್ಲಿ ತೊಡಗಿದ್ದಾರೆ. ಅದರಲ್ಲೂ ಕಡಿದಾದ ದೊಡ್ಡ ಬಂಡೆಗಳನ್ನು ಏರುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಐಂದ್ರಿತಾ ಮತ್ತು ದಿಗಂತ್ ಗುಂಪು ಕಟ್ಟಿಕೊಂಡು ಗುಡ್ಡಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಇನ್‍ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಬರೆದುಕೊಂಡಿರುವ ಅವರು, ನಿಜವಾಗಿಯೂ ಇದು ತುಂಬಾ ಕಠಿಣ ಎಂದಿದ್ದಾರೆ.

ಇದು ನನ್ನ ಮೂರನೇ ಪ್ರಯತ್ನ, ಹಗ್ಗ ಹಾಗೂ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಹತ್ತಿದ್ದಕ್ಕೆ ಒಂದು ಕ್ಷಣ ಹೃದಯ ಬಡಿತವೇ ನಿಂತತಾಯಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.