ಪವರ್ ಸ್ಟಾರ್ ಅಪ್ಪು ಬ್ಯಾನರ್’ನಿಂದ ‘O2’ ನ್ಯೂ ಪ್ರಾಜೆಕ್ಟ್!

ಬೆಂಗಳೂರು, ಜುಲೈ 07, 2020 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾನರ್ ನಿಂದ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ.

ಚಿತ್ರಕ್ಕೆ O2 ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಹಿಂದೆ ಉಪೇಂದ್ರ H2O ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಈಗ o2 ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಅಪ್ಪು.

ಪುನೀತ್ ನಿರ್ಮಾಣದಲ್ಲಿ ಬಂದ ಈಗಾಗಲೆ ರಿಲೀಸ್ ಆಗಿರುವ ಮಾಯಾ ಬಜಾರ್ ಸಿನಿಮಾದ ನಿರ್ದೇಶಕ ರಾಧಾಕೃಷ್ಣ , ಈ ಸಿನಿಮಾದ ನಿರ್ಮಾಣ ವಿಭಾಗದಲ್ಲಿಯೂ ಕೈ ಜೋಡಿಸಿದ್ದಾರೆ. ಪ್ರಶಾಂತ್ ರಾಜ್ ಮತ್ತು ರಾಘವ್ ಇಬ್ಬರು ನಿರ್ದೇಶನ ಮಾಡುತ್ತಿದ್ದಾರೆ. ಅಪರೂಪದ ಕಥೆಯನ್ನು ಇಟ್ಟುಕೊಂಡು ಬರ್ತಿರುವ O2 ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.